ಮುಂಬೈ: ಬಾಲಿವುಡ್‌ನ ಪ್ರತಿಭಾವಂತ ನಟಿ ಶೆಫಾಲಿ ಶಾ ಅವರು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಮತ್ತು ಪರ-ವಿರೋಧದ ಅಲೆ ಎಬ್ಬಿಸಿದೆ. “ಮಕ್ಕಳಿಗಿಂತ ನಾಯಿಗಳೇ ಬೆಸ್ಟ್, ಅವುಗಳನ್ನೇ ಸಾಕಿಕೊಳ್ಳಿ” ಎಂದು ಹೇಳುವ ಮೂಲಕ ಶೆಫಾಲಿ ಅವರು ಪೋಷಕತ್ವ ಮತ್ತು ಸಾಕುಪ್ರಾಣಿಗಳ ಪ್ರೇಮದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶೆಫಾಲಿ ಶಾ, ಮಾನವ ಸಂಬಂಧಗಳ ಸಂಕೀರ್ಣತೆ ಮತ್ತು ಸಾಕುಪ್ರಾಣಿಗಳ ನಿಷ್ಕಲ್ಮಶ ಪ್ರೀತಿಯನ್ನು ಹೋಲಿಸಿದ್ದಾರೆ. “ಮಕ್ಕಳು ಬೆಳೆದಂತೆ ತಮ್ಮದೇ ಆದ ದಾರಿ ಆರಿಸಿಕೊಳ್ಳುತ್ತಾರೆ, ಅದು ಸಹಜ. ಆದರೆ ನಾಯಿಗಳು ನೀಡುವ ಪ್ರೀತಿ ಬೇಷರತ್ತಾದದ್ದು (Unconditional). ಕೆಲವೊಮ್ಮೆ ಮಕ್ಕಳನ್ನು ಬೆಳೆಸುವ ಸವಾಲುಗಳಿಗಿಂತ ನಾಯಿಗಳನ್ನು ಸಾಕುವುದು ಹೆಚ್ಚು ಸಂತೋಷ ನೀಡುತ್ತದೆ,” ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: Viral Video: ಬಣ್ಣ ಎರಚಿದ ಪುಟ್ಟ ಬಾಲಕನ ಮೇಲೆ ಬಿಸಿಬಿಸಿ ನೀರು ಸುರಿದ ಅಜ್ಜಿ! ಬಾಲಕನ ನರಳಾಟ
ಶೆಫಾಲಿ ಅವರ ಈ ಮಾತುಗಳು ಕೇಳುತ್ತಿದ್ದಂತೆಯೇ ಇಂಟರ್ನೆಟ್ ಎರಡು ಭಾಗಗಳಾಗಿ ವಿಭಜನೆಗೊಂಡಿದೆ. ಪ್ರಾಣಿ ಪ್ರೇಮಿಗಳು ಶೆಫಾಲಿ ಅವರ ಮಾತಿಗೆ ಬೆಂಬಲ ಸೂಚಿಸಿದ್ದರೆ, ಇನ್ನು ಕೆಲವು ನೆಟ್ಟಿಗರು “ಮಕ್ಕಳನ್ನು ಪ್ರಾಣಿಗಳಿಗೆ ಹೋಲಿಸುವುದು ತಪ್ಪು” ಎಂದು ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯು ‘Child-free’ ಜೀವನಶೈಲಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಹೆಚ್ಚು ವೈರಲ್ ಆಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


