ಮಹಾರಾಷ್ಟ್ರ: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯ ಆಟ ಭೀಕರವಾಗಿ ಪರಿಣಮಿಸಿದೆ. ಮಗಳ ಕೈ ಹಿಡಿದು ವರನಿಗೆ ಒಪ್ಪಿಸಿ ‘ಕನ್ಯಾದಾನ’ ಮಾಡಿದ ಕೆಲವೇ ನಿಮಿಷಗಳಲ್ಲಿ ತಂದೆಯೊಬ್ಬರು ತೀವ್ರ ಹೃದಯಾಘಾತದಿಂದ ಮದುವೆ ಮಂಟಪದಲ್ಲೇ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ವರ್ದಾದಿಯಲ್ಲಿ ನಡೆದಿದೆ.
ವರ್ದಾದಿಯ ಕುರುಮದಾಸ್ ಭೂತೇಕರ್ ಅವರ ಪುತ್ರಿ ನಂದಿನಿ ಮತ್ತು ಜಲ್ನಾ ಜಿಲ್ಲೆಯ ಪ್ರದೀಪ್ ನಾನೋಟೆ ಅವರ ವಿವಾಹ ಗುರುವಾರ ಸಂಜೆ ಅದ್ದೂರಿಯಾಗಿ ನಡೆಯುತ್ತಿತ್ತು. ಶಾಸ್ತ್ರೋಕ್ತವಾಗಿ ಕನ್ಯಾದಾನ ವಿಧಿ ಮುಗಿಸಿ, ಮಗಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದ ಕುರುಮದಾಸ್ ಅವರಿಗೆ ಇದ್ದಕ್ಕಿದ್ದಂತೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಚಿಕಿತ್ಸೆಗೆ ಸ್ಪಂದಿಸುವ ಮೊದಲೇ ಅವರು ಮಂಟಪದಲ್ಲೇ ಕುಸಿದುಬಿದ್ದಿದ್ದಾರೆ.
ಇದನ್ನೂ ಓದಿ: ಉಳ್ಳಾಲದಲ್ಲಿ ಮೀನಿನ ಎಣ್ಣೆ ಸುರಿದು ರಸ್ತೆ ತುಂಬಾ ರಾದ್ಧಾಂತ: ಹಲವು ಬೈಕ್ ಸವಾರರಿಗೆ ಗಾಯ
ಮದುವೆಯ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಮಗಳಿಗೆ ತಂದೆಯ ಅಗಲಿಕೆ ಅರಗಿಸಿಕೊಳ್ಳಲಾಗದ ಆಘಾತ ನೀಡಿದೆ. ಮಗಳ ವಿದಾಯದ ಹೊತ್ತಲ್ಲೇ ತಂದೆಯ ಪ್ರಾಣಪಕ್ಷಿ ಹಾರಿಹೋದ ಈ ಘಟನೆಯಿಂದ ವರ್ದಾದಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಸಂಭ್ರಮದಿಂದ ಸಾಗಬೇಕಿದ್ದ ಬೀಳ್ಕೊಡುಗೆ ಸಮಾರಂಭವು ಕಣ್ಣೀರಿನ ಮಡುವಾಗಿ ಬದಲಾಯಿತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


