ಉಳ್ಳಾಲ: ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆಯನ್ನು ಸಾಗಿಸುತ್ತಿದ್ದ ಕ್ಯಾಂಟರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಉಳ್ಳಾಲದ ಮುಖ್ಯ ರಸ್ತೆಯಲ್ಲೇ ಭಾರಿ ಪ್ರಮಾಣದ ಎಣ್ಣೆ ಸೋರಿಕೆಯಾಗಿದೆ. ಇದರಿಂದಾಗಿ ರಸ್ತೆಯುದ್ದಕ್ಕೂ ಎಣ್ಣೆ ಹರಡಿದ್ದು, ಸಂಚಾರಕ್ಕೆ ಅಡ್ಡಿಯಾಗಿದ್ದಲ್ಲದೆ ಹಲವು ಅಪಘಾತಗಳಿಗೆ ಕಾರಣವಾಗಿದೆ.
ಗುರುವಾರ ರಾತ್ರಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಎಣ್ಣೆ ಸಾಗಿಸುತ್ತಿದ್ದ ಬೃಹತ್ ಕ್ಯಾಂಟರ್‌ನಿಂದ ಅಬ್ಬಕ್ಕ ಸರ್ಕಲ್‌ನಿಂದ ಉಳ್ಳಾಲ ಬೈಲ್‌ವರೆಗೆ ಎಣ್ಣೆ ಸೋರಿಕೆಯಾಗಿದೆ. ರಸ್ತೆಯ ಮೇಲೆ ಹರಡಿದ ಎಣ್ಣೆಯಿಂದಾಗಿ ರಸ್ತೆ ಸಂಪೂರ್ಣ ಜಾರುಮಯವಾಗಿತ್ತು. ಈ ವೇಳೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಸವಾರರು ಆಯತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ; ನಾಳೆಯಿಂದ ಭಾರೀ ಮಳೆಯ ಮುನ್ಸೂಚನೆ!
ಸತತವಾಗಿ ವಾಹನ ಸವಾರರು ಅಪಘಾತಕ್ಕೀಡಾಗುತ್ತಿರುವುದನ್ನು ಕಂಡು ಆಕ್ರೋಶಗೊಂಡ ಸ್ಥಳೀಯರು, ಉಳ್ಳಾಲ ಬೈಲ್ ಬಳಿ ಕ್ಯಾಂಟರ್ ಅನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಲಕ್ಷಾಂತರ ರೂಪಾಯಿ ಮೌಲ್ಯದ ಎಣ್ಣೆ ರಸ್ತೆ ಪಾಲಾಗಿದ್ದು, ನಂತರ ಅದನ್ನು ಬೇರೊಂದು ವಾಹನಕ್ಕೆ ವರ್ಗಾಯಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಅಬ್ಬಕ್ಕ ಸರ್ಕಲ್‌ನಿಂದ ಉಳ್ಳಾಲ ಬೈಲ್‌ವರೆಗೆ ಕೆಲಕಾಲ ಏಕಮುಖ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


