ವಿಶ್ವದ ಮೊದಲ ‘ಟ್ರಿಲಿಯನೇರ್’ ಆದ ಎಲೋನ್ ಮಸ್ಕ್

ನ್ಯೂಯಾರ್ಕ್: ಜಗತ್ತಿನ ನಂಬರ್ ಒನ್ ಶ್ರೀಮಂತ ಎಲೋನ್ ಮಸ್ಕ್, ಜಾಗತಿಕ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಶುಕ್ರವಾರ ಅವರ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ಸ್ಪೇಸ್‌ಎಕ್ಸ್’ (SpaceX) ಷೇರು ಮಾರುಕಟ್ಟೆಗೆ ಭರ್ಜರಿಯಾಗಿ ಪದಾರ್ಪಣೆ ಮಾಡಿದ ಬೆನ್ನಲ್ಲೇ, ಎಲೋನ್ ಮಸ್ಕ್ ಅಧಿಕೃತವಾಗಿ ವಿಶ್ವದ ಮೊದಲ ‘ಟ್ರಿಲಿಯನೇರ್’ (ಲಕ್ಷ ಕೋಟಿ ಒಡೆಯ) ಆಗಿ ಹೊರಹೊಮ್ಮಿದ್ದಾರೆ.

ಸ್ಪೇಸ್‌ಎಕ್ಸ್ ಮ್ಯಾಜಿಕ್, ರಾಕೆಟ್ ವೇಗದಲ್ಲಿ ಬೆಳೆದ ಆಸ್ತಿ:

ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದ ಮೊದಲ ದಿನವೇ ಸ್ಪೇಸ್‌ಎಕ್ಸ್ ಷೇರುಗಳು ಶೇಕಡಾ 11 ರಷ್ಟು ಜಿಗಿತ ಕಂಡು 150 ಡಾಲರ್‌ಗೆ ತಲುಪಿದವು. ಆ ನಂತರ ಮತ್ತಷ್ಟು ಏರಿಕೆ ಕಂಡು 172 ಡಾಲರ್ ಆಸುಪಾಸಿನಲ್ಲಿ ವಹಿವಾಟು ಮುಗಿಸಿದವು. ಇದರೊಂದಿಗೆ ಸ್ಪೇಸ್‌ಎಕ್ಸ್ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 2.18 ಟ್ರಿಲಿಯನ್ ಡಾಲರ್ (ಸುಮಾರು 2.18 ಲಕ್ಷ ಕೋಟಿ ಡಾಲರ್) ತಲುಪಿದೆ.

ಐಪಿಒ (IPO) ಆರಂಭದಲ್ಲಿ 135 ಡಾಲರ್ ಇದ್ದ ಸ್ಪೇಸ್‌ಎಕ್ಸ್ ಷೇರು ಬೆಲೆ ದಿಢೀರನೆ ಏರಿದ್ದರಿಂದ ಮಸ್ಕ್ ಅವರ ಸಂಪತ್ತು ಜಗತ್ತಿನ ಯಾವುದೇ ಉದ್ಯಮಿ ತಲುಪದ ಎತ್ತರಕ್ಕೆ ಜಿಗಿದಿದೆ. ಪ್ರಸ್ತುತ ಮಸ್ಕ್ ಅವರ ಒಟ್ಟು ಆಸ್ತಿಯು ಸ್ಪೇಸ್‌ಎಕ್ಸ್, ಎಲೆಕ್ಟ್ರಿಕ್ ಕಾರ್ ಸಂಸ್ಥೆ ‘ಟೆಸ್ಲಾ’ (Tesla), ನ್ಯೂರೋಟೆಕ್ನಾಲಜಿ ಸಂಸ್ಥೆ ‘ನ್ಯೂರಾಲಿಂಕ್’ ಹಾಗೂ ಸುರಂಗ ನಿರ್ಮಾಣ ಸಂಸ್ಥೆ ‘ದಿ ಬೋರಿಂಗ್ ಕಂಪನಿ’ಗಳ  ಷೇರುಗಳನ್ನು ಒಳಗೊಂಡಿದೆ. ಜೂನ್ 2021 ರಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಮಸ್ಕ್, ಈಗ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್ ಆಗಿದ್ದಾರೆ.

ಸ್ಪೇಸ್‌ಎಕ್ಸ್ ಐಪಿಒಗೆ ಬಂದಿದ್ದು ಏಕೆ?

ಸ್ಪೇಸ್‌ಎಕ್ಸ್ ಸಂಸ್ಥೆಯನ್ನು ಸಾರ್ವಜನಿಕ ಷೇರು ಮಾರುಕಟ್ಟೆಗೆ  ತಂದಿರುವ ಉದ್ದೇಶವನ್ನು ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಬಾಹ್ಯಾಕಾಶದಲ್ಲಿ ಬೃಹತ್ ಉಪಗ್ರಹಗಳು ಹಾಗೂ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಮತ್ತು ಅಂತಿಮವಾಗಿ ಮಂಗಳ ಗ್ರಹದಲ್ಲಿ ಮಾನವ ವಸಾಹತು ನಿರ್ಮಿಸಲು ಕಂಪನಿಗೆ ಭಾರಿ ಪ್ರಮಾಣದ ಹಣದ ಅಗತ್ಯವಿದೆ. ಮಾನವ ಜೀವನವನ್ನು ಬಹು-ಗ್ರಹಗಳ ನಿವಾಸಿಯನ್ನಾಗಿ  ಮಾಡುವುದು ನನ್ನ ಗುರಿ ಎಂದು ಅವರು ಪುನರುಚ್ಚರಿಸಿದ್ದಾರೆ.

“ಇದು ಕೇವಲ ಕೆಲವೇ ಕೆಲವು ಗಗನಯಾತ್ರಿಗಳಿಗಾಗಿ ಅಲ್ಲ, ನಿಮಗಾಗಿ! ಇದನ್ನು ನೋಡುತ್ತಿರುವ ನೀವು ಯಾರೇ ಆಗಿರಲಿ, ನಿಮ್ಮನ್ನು ಚಂದ್ರನಿಗೆ, ಮಂಗಳ ಗ್ರಹಕ್ಕೆ ಮತ್ತು ಅದರಾಚೆಗೂ ಕರೆದೊಯ್ಯಲು ಸ್ಪೇಸ್‌ಎಕ್ಸ್ ಬಯಸುತ್ತದೆ” ಎಂದು ಮಸ್ಕ್ ಹೇಳಿದ್ದಾರೆ. ಮಂಗಳ ಗ್ರಹದಲ್ಲಿ 10 ಲಕ್ಷ ಜನರ ವಸಾಹತು ನಿರ್ಮಿಸುವ ಗುರಿಯ ಜೊತೆಗೆ, ಕೃತಕ ಬುದ್ಧಿಮತ್ತೆ (AI) ರೇಸ್‌ನಲ್ಲಿ ಎದುರಾಳಿಗಳಾದ ಆಂಥ್ರೋಪಿಕಲ್ ಮತ್ತು ಓಪನ್ ಏಐ ಸಂಸ್ಥೆಗಳನ್ನು ಹಿಂದಿಕ್ಕುವ ಯೋಜನೆಯನ್ನೂ ಮಸ್ಕ್ ಹೊಂದಿದ್ದಾರೆ. ಇಂತಹ ಬೃಹತ್ ಯೋಜನೆಗಳ ಕಾರಣದಿಂದಾಗಿ ಕಂಪನಿಗೆ ಕೋಟ್ಯಂತರ ಹಣದ ಅಗತ್ಯವಿದೆ. 2025 ರ ಆರಂಭದಿಂದ 2026 ರ ಮಾರ್ಚ್ 31 ರ ನಡುವೆ ಸ್ಪೇಸ್‌ಎಕ್ಸ್ ಬರೋಬ್ಬರಿ 8.7 ಬಿಲಿಯನ್ ಡಾಲರ್ ನಷ್ಟ ಅನುಭವಿಸಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ: ಪೆಟ್ರೋಲ್ ಬಂಕ್‌ಗಳಲ್ಲಿ ಇನ್ಮುಂದೆ ದಿನಕ್ಕೆ 200 ಲೀಟರ್‌ಗಿಂತ ಹೆಚ್ಚು ಡೀಸೆಲ್ ಸಿಗಲ್ಲ: ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿ!

ಹಣಕ್ಕೆ ಬೆಲೆಯೇ ಇರುವುದಿಲ್ಲ ಎಂದಿದ್ದ ಮಸ್ಕ್!

ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಸ್ಕ್, ಭವಿಷ್ಯದಲ್ಲಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ಹಣ ಎಂಬ ಪರಿಕಲ್ಪನೆಯೇ ಮೌಲ್ಯ ಕಳೆದುಕೊಳ್ಳಲಿದೆ (Irrelevant) ಮತ್ತು ಕೆಲಸ ಮಾಡುವುದು ಕೇವಲ ಐಚ್ಛಿಕವಾಗಲಿದೆ (Optional) ಎಂದು ಭವಿಷ್ಯ ನುಡಿದಿದ್ದರು. ಕೃತಕ ಬುದ್ಧಿಮತ್ತೆ (AI) ಮತ್ತು ಹ್ಯೂಮನಾಯ್ಡ್ ರೋಬೋಟ್‌ಗಳು ಜಗತ್ತಿನಲ್ಲಿ ಅತಿ ಹೆಚ್ಚು ಉತ್ಪಾದಕತೆಯನ್ನು ತರಲಿವೆ. ಇದರಿಂದಾಗಿ ಜಗತ್ತಿನಲ್ಲಿ ಬಡತನ ಸಂಪೂರ್ಣ ನಿರ್ಮೂಲನೆಯಾಗಲಿದ್ದು, ಉದ್ಯೋಗಗಳು ಕೇವಲ ಹವ್ಯಾಸಗಳಾಗಿ ಬದಲಾಗಲಿವೆ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದರು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು