ದೆಹಲಿ: ಕ್ಯಾನ್ಸರ್ ಎಂಬ ಮಹಾಮಾರಿ ತನ್ನ ಕೊನೆಯ ಹಂತದಲ್ಲಿದ್ದಾಗ, ಇನ್ಮುಂದೆ ತಾನು ಮಗನ ಜೊತೆ ಇರುವುದಿಲ್ಲ ಎಂದು ತಿಳಿದ ತಂದೆಯೊಬ್ಬ ತನ್ನ ಸಣ್ಣ ಮಗನಿಗೆ ಆಡಿದ ಕೊನೆಯ ಮಾತುಗಳ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಕಣ್ಣಂಚಲ್ಲಿ ನೀರು ತರಿಸಿದೆ. ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ‘Woke Eminent’ ಖಾತೆಯಿಂದ ಹಂಚಿಕೊಳ್ಳಲಾದ ಈ ಭಾವುಕ ವಿಡಿಯೋ ನೆಟ್ಟಿಗರ ಮನ ಮಿಡಿಯುವಂತೆ ಮಾಡಿದೆ.
ಮಗನಿಗೆ ತಂದೆಯ ಕೊನೆಯ ಸಂದೇಶ ವೈರಲ್ ವಿಡಿಯೋದಲ್ಲಿ ಮುಖಕ್ಕೆ ಫೇಸ್ ಮಾಸ್ಕ್ ಧರಿಸಿರುವ ತಂದೆ, ತನ್ನ ಮುದ್ದು ಮಗ ‘ಮಂತ್ರ’ನ ಬಳಿ ಕುಳಿತು ಅತ್ಯಂತ ಶಾಂತವಾಗಿ ಮಾತನಾಡುವುದು ಕಾಣಿಸುತ್ತದೆ. ತಾನು ಇಲ್ಲದ ಭವಿಷ್ಯಕ್ಕೆ ಮಗನನ್ನು ಸಿದ್ಧಪಡಿಸುತ್ತಾ ಆಡಿದ ಮಾತುಗಳು ಪ್ರತಿಯೊಬ್ಬರ ಹೃದಯ ತಟ್ಟುವಂತಿವೆ:
ಮಂತ್ರಾ, ನಾನು ಎಲ್ಲಾದರೂ ಹೋದರೆ, ನಿಮ್ಮ ಅಮ್ಮ ಹೇಳಿದಂತೆ ಕೇಳು. ಅಮ್ಮನನ್ನು ಚೆನ್ನಾಗಿ ನೋಡಿಕೋ. ಅಪ್ಪ ಎಲ್ಲಿದ್ದಾನೆ ಅಂತ ಹುಡುಕಬೇಡ ಅಥವಾ ಕೇಳಬೇಡ. ನಿನ್ನ ಇಬ್ಬರು ತಂಗಿಯರ ಜವಾಬ್ದಾರಿ ನಿನ್ನ ಮೇಲಿದೆ, ಅವರನ್ನೂ ಚೆನ್ನಾಗಿ ನೋಡಿಕೋ. ನಿನಗೆ ಯಾವಾಗ ನನ್ನ ನೆನಪಾಗುತ್ತದೆಯೋ, ಆಗಲೆಲ್ಲಾ ನಾನು ನಿನ್ನ ಸುತ್ತಮುತ್ತಲೇ ಇರುತ್ತೇನೆ” ಎಂದು ತಂದೆ ಮಗನಿಗೆ ಧೈರ್ಯ ತುಂಬಿದ್ದಾರೆ.
ಇಲ್ಲಿದೆ ನೋಡಿ ಸ್ಟೋರಿ:
Father talking to his son for the last time 💔
In a deeply moving and heartbreaking moment, a father battling terminal cancer left a poignant final message for his young son, Mantra,
Before passing away. In his last words, he gently instructed Mantra to always listen to his… pic.twitter.com/S578O8xeKX— Woke Eminent (@WokePandemic) July 29, 2026
ತಾನು ಸಾವನ್ನಪ್ಪುತ್ತಿದ್ದೇನೆ ಎಂದು ಮಗನಿಗೆ ನೇರವಾಗಿ ಹೇಳಿ ಆತನನ್ನು ಹೆದರಿಸುವ ಬದಲು, “ತಾನು ಎಲ್ಲಾದರೂ ಹೋದರೆ” ಎಂದು ಸರಳವಾಗಿ ಹೇಳಿ, ಪ್ರೀತಿಯಿಂದ ಮಗನಿಗೆ ಜವಾಬ್ದಾರಿಯನ್ನು ನೆನಪಿಸಿದ್ದಾರೆ.”ಮಗ ಕೊನೆಯ ಕ್ಷಣದಲ್ಲಿ ಅಳಬಾರದು” ಎಂದು ಪ್ರೀತಿಯಿಂದ ಸಮಾಧಾನ ಪಡಿಸಿದ ಈ ತಂದೆಯ ಪ್ರೀತಿ ಎಲ್ಲರನ್ನೂ ಭಾವುಕರನ್ನಾಗಿಸಿದೆ.
ಇದನ್ನೂ ಓದಿ: ಮಗು ಕುಳಿತಿದ್ದ ಸ್ಟ್ರೋಲರ್‌ಗೆ ಒದ್ದ ವ್ಯಾಪಾರಿಗೆ ಯಮಲೋಕ ದರ್ಶನ ಮಾಡಿಸಿದ ತಂದೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. “ಈ ವಿಡಿಯೋವನ್ನು ಪೂರ್ತಿಯಾಗಿ ಅಳದೆ ನೋಡಲು ಸಾಧ್ಯವೇ ಇಲ್ಲ” ಎಂದು ಹಲವರು ಬರೆದುಕೊಂಡಿದ್ದಾರೆ. “ಯಾವ ತಂದೆ ಮತ್ತು ಮಗನಿಗೂ ಇಂತಹ ಕಠಿಣ ವಿದಾಯದ ಕ್ಷಣ ಬರಬಾರದು. ಸಣ್ಣ ಮಗುವಿನ ಮುಗ್ಧತೆ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತದೆ” ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವಸ್ಥಾನ ಮತ್ತು ಆತನ ಕುಟುಂಬಕ್ಕೆ ನೀಡಲಿ ಎಂದು ಲಕ್ಷಾಂತರ ಜನರು ಪ್ರಾರ್ಥಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

