‘ಅಪರೂಪದ ಸನ್ನಿವೇಶಗಳಲ್ಲಿ ಪೆಲೆಟ್ ಗನ್ ಬಳಸಲು ಪೋಲೀಸರಿಗೆ ಅಧಿಕಾರವಿದೆ’: ಸುಪ್ರೀಂ ಕೋರ್ಟ್

ದೆಹಲಿ: ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸುವ ವೇಳೆ ಲೋಹದ ಪೆಲೆಟ್ ಗನ್‌ಗಳ (Pellet Guns) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಪರೂಪದ ಹಾಗೂ ವಿಶೇಷ ಪರಿಸ್ಥಿತಿಗಳಲ್ಲಿ ಪೆಲೆಟ್ ಗನ್ ಬಳಸಲು ಪೊಲೀಸ್ ಪಡೆಗಳಿಗೆ ಅನುಮತಿ ನೀಡಬಹುದು ಎಂದು ಗುರುವಾರ (ಜುಲೈ 30) ಅಭಿಪ್ರಾಯಪಟ್ಟಿದೆ.

ಮಾಜಿ ಕೇಂದ್ರ ಮಾಹಿತಿ ಆಯುಕ್ತ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಮತ್ತು ಇಬ್ಬರು ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠವು ಈ ಪ್ರಮುಖ ಹೇಳಿಕೆ ನೀಡಿದೆ.

ಇದನ್ನೂ ಓದಿ: ‘ಆರ್‌ಎಸ್‌ಎಸ್‌ಗೆ ಸೇರಿ, ದೇಶಪ್ರೇಮ ಕಲಿಯಿರಿ’: ಪ್ರಿಯಾಂಕಾ ಗಾಂಧಿ ಬೆವರಿಳಿಸಿದ ಅನುರಾಗ್ ಠಾಕೂರ್

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPRD) ಸಲಹೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಅತ್ಯಂತ ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಪೆಲೆಟ್ ಗನ್ ಬಳಸುವ ಅಧಿಕಾರ ಪೊಲೀಸರಿಗಿದೆ ಎಂದು ತಿಳಿಸಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ನೀಟ್ (NEET) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆಯಾಗಿರುವ ಬಗ್ಗೆ ತನಿಖೆ ನಡೆಸಲು ಮತ್ತು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *