Breaking News

ಅಮೆರಿಕನ್ ಡಾಲರ್ ಕುಸಿತ: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಬೆಳ್ಳಿ ದರ ಕೊಂಚ ಇಳಿಕೆ

ದೆಹಲಿ: ಅಮೆರಿಕದ ಟ್ರೆಜರಿ ಬಾಂಡ್ ಇಳುವರಿ (Treasury yields) ಕುಸಿತ ಹಾಗೂ ಅಮೆರಿಕನ್ ಡಾಲರ್ ಮೌಲ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 24 ರ ಸೋಮವಾರ ಬೆಳಗಿನ ವಹಿವಾಟಿನಲ್ಲಿ ಜಾಗತಿಕ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಅದೇ ಸಮಯದಲ್ಲಿ ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ದಾಖಲಾಗಿದೆ.

ಸೋಮವಾರ ಬೆಳಗಿನ ವಹಿವಾಟಿನಲ್ಲಿ COMEX ಫ್ಯೂಚರ್ಸ್ ಚಿನ್ನದ ಬೆಲೆ ಶೇ. 0.47 ರಷ್ಟು ಹೆಚ್ಚಳವಾಗಿ ಪ್ರತಿ ಔನ್ಸ್‌ಗೆ USD 4,702.70 ತಲುಪಿದೆ.ಸೋಮವಾರ ಬೆಳಿಗ್ಗೆ ಬೆಳ್ಳಿ ಬೆಲೆ ಶೇ. 0.69 ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್‌ಗೆ USD 69.05 ಕ್ಕೆ ತಲುಪಿದೆ.

ಆಗಸ್ಟ್ 21 ರ ಶುಕ್ರವಾರದ ವಹಿವಾಟಿನಲ್ಲಿ ಅಕ್ಟೋಬರ್ ಕಾಂಟ್ರಾಕ್ಟ್‌ನ MCX ಫ್ಯೂಚರ್ಸ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,62,440 ರಲ್ಲಿ ಸ್ಥಿರವಾಗಿ ಕೊನೆಗೊಂಡಿತ್ತು. ಸೆಪ್ಟೆಂಬರ್ ಕಾಂಟ್ರಾಕ್ಟ್‌ನ ಬೆಳ್ಳಿ ದರ ಶೇ. 1.28 ರಷ್ಟು ಭಾರಿ ಜಿಗಿತ ಕಂಡು ಪ್ರತಿ ಕೆಜಿಗೆ ₹2,46,360 ತಲುಪಿತ್ತು.

ಇದನ್ನೂ ಓದಿ: ಪುತ್ತೂರು ಹಲ್ಲೆ ಪ್ರಕರಣ: ತಾವು ಏನೂ ಮಾಡಿದರೂ ನಮ್ಮ ಬೆಂಬಲಕ್ಕೆ ಸರ್ಕಾರ ಇದೆ ಎಂಬ ಧೈರ್ಯ ಅವರಿಗೆ: ಕಟೀಲ್ ಆಕ್ರೋಶ

ಸ್ಪಾಟ್ ಚಿನ್ನದ ದರ ಆ.20 ರಂದು USD 4,582.10 ರಲ್ಲಿತ್ತು. ಇತ್ತ ಶುಕ್ರವಾರ MCX ದೇಶೀಯ ಸ್ಪಾಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹1,59,802 ಕ್ಕೆ ಏರಿಕೆಯಾಗಿತ್ತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *