ಜಾಗತಿಕ ಉದ್ವಿಘ್ನತೆಯ ನಡುವೆ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆ!

ದೆಹಲಿ : ಅಂತರಾಷ್ಟ್ರೀಯ ಹಣಕಾಸು ನಿಧಿ ಪ್ರಕಾರ, ಭಾರತವು 2026 ಮತ್ತು 2027ರಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುವ ದೇಶವಾಗಿ ಮುಂದುವರಿಯಲಿದೆ.

ಐಎಂಎಫ್ ತನ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ, ಭಾರತ ಆರ್ಥಿಕ ಬೆಳವಣಿಗೆ ದರವನ್ನು ಈ ಅವಧಿಯಲ್ಲಿ ಸುಮಾರು 6.4% ಮಟ್ಟದಲ್ಲಿ ಇರಲಿದೆ ಎಂದು ಅಂದಾಜಿಸಿದೆ. ಇದು ಇತರ ದೊಡ್ಡ ಆರ್ಥಿಕತೆಗಳಿಗಿಂತ ಹೆಚ್ಚು ವೇಗವಾಗಿದ್ದು, ಭಾರತ ತನ್ನ ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳುತ್ತದೆ ಎಂದು ತಿಳಿಸಿದೆ.

Advertisement

ಇದನ್ನೂ ಓದಿ ಭೂಮಿಯಿಂದ ದೂರ ಸರಿಯುತ್ತಿದ್ದಾನೆ ಚಂದ್ರ: ಇನ್ನು ಮುಂದೆ ದಿನಕ್ಕೆ 24 ಅಲ್ಲ, 25 ಗಂಟೆ!

ಜಾಗತಿಕವಾಗಿ ಆರ್ಥಿಕ ಬೆಳವಣಿಗೆ ನಿಧಾನಗೊಳ್ಳುತ್ತಿರುವ ಸಂದರ್ಭದಲ್ಲಿ, ಭಾರತದಲ್ಲಿ ಗೃಹಬಳಕೆ, ಹೂಡಿಕೆ ಹಾಗೂ ನೀತಿ ಸುಧಾರಣೆಗಳ ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳು ಬಲವಾಗಿವೆ ಎಂದು ಐಎಂಎಫ್ ಹೇಳಿದೆ.

Advertisement

ಮುಂದಿನ ವರ್ಷಗಳಲ್ಲಿ ತಾತ್ಕಾಲಿಕ ಕಾರಣಗಳು ಕಡಿಮೆಯಾಗುವ ಹಿನ್ನೆಲೆ, ಬೆಳವಣಿಗೆ ಸ್ವಲ್ಪ ಮಟ್ಟಿಗೆ ಸಮತೋಲನಕ್ಕೆ ಬರುವ ಸಾಧ್ಯತೆಯಿದೆ ಎಂದು ವರದಿ ಸೂಚಿಸಿದೆ.

ಜಾಗತಿಕ ಸವಾಲುಗಳ ನಡುವೆಯೂ ಭಾರತ ತನ್ನ ಬಲಿಷ್ಠ ಆರ್ಥಿಕ ನೆಲೆಯೊಂದಿಗೆ ಮುಂದುವರಿಯುತ್ತಿದ್ದು, ವಿಶ್ವದ ವೇಗವಾಗಿ ಬೆಳೆಯುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂದು ಐಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ.

ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು