IPL: ಫಲಿಸದ ಆಯುಷ್ ಮಿಂಚಿನ ಆಟ, ರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಪಂಜಾಬ್

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಪಂಜಾಬ್ ಕಿಂಗ್ಸ್ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಆಯುಷ್ ಮ್ಹಾತ್ರೆ 42 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ 73 ರನ್‌ಗಳ ಮಿಂಚಿನ ಇನ್ನಿಂಗ್ಸ್ ಆಡಿದರು. ಶಿವಂ ದುಬೆ ಅಜೇಯವಾಗಿ 45 ರನ್ ಗಳಿಸಿದರು.

Advertisement

ಇನ್ನು ಉಳಿದಂತೆ ಸಂಜು ಸ್ಯಾಮ್ಸನ್ 7, ರುತುರಾಜ್ ಗಾಯಕ್ವಾಡ್ 28, ಕಾರ್ತಿಕ್ ಶರ್ಮಾ 1, ಸರ್ಫರಾಜ್ ಖಾನ್ 32 ಮತ್ತು ಪ್ರಶಾಂತ್ ವೀರ್ 6 ರನ್‌ಗಳೊಂದಿಗೆ ಅಜೇಯರಾಗಿದ್ದರು.

ಪಂಜಾಬ್ ಪರ ಬೌಲಿಂಗ್‌ನಲ್ಲಿ ವಿಜಯ್ ಕುಮಾರ್ ವೈಶಾಕ್ 2 ವಿಕೆಟ್‌ಗಳನ್ನು ಪಡೆದರೆ, ಕ್ಸೇವಿಯರ್ ಬಾರ್ಟ್ಲೆಟ್, ಯಜ್ವೇಂದ್ರ ಚಾಹಲ್ ಹಾಗೂ ಮಾರ್ಕೊ ಜಾನ್ಸೆನ್ ತಲಾ 1 ವಿಕೆಟ್‌ಗಳನ್ನು ಕಬಳಿಸಿದರು.

Advertisement

ಇದನ್ನೂ ಓದಿ: ಐಪಿಎಲ್ 2026: ಸಂಜು ಸ್ಯಾಮ್ಸನ್‌ಗೆ ಸತತ ಎರಡನೇ ಸೋಲು; ಸಿಎಸ್‌ಕೆ vs ಪಿಬಿ ಕೆಎಸ್ ಪಂದ್ಯದಲ್ಲೂ ನಿರಾಸೆ!

210 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡದ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ ಚೆನ್ನೈ ಬೌಲರ್‌ಗಳನ್ನು ದಂಡಿಸಿದರು. ಅವರು ಕೇವಲ 11 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 39 ರನ್ ಗಳಿಸಿ ಔಟ್ ಆದರು.

Advertisement

ಪ್ರಭಸಿಮ್ರಾನ್ ಸಿಂಗ್ 43, ಕೂಪರ್ ಕೊನ್ನೋಲಿ 36, ಶ್ರೇಯಸ್ ಅಯ್ಯರ್ 50 ರನ್‌ಗಳೊಂದಿಗೆ ತಂಡದ ಗೆಲುವಿಗೆ ಭದ್ರ ನೆಲೆ ನೀಡಿದರು. ಶಶಾಂಕ್ ಸಿಂಗ್ 14 ಹಾಗೂ ಮಾರ್ಕಸ್ ಸ್ಟೋಯ್ನಿಸ್ 5 ರನ್‌ಗಳೊಂದಿಗೆ ಅಜೇಯರಾಗಿದ್ದು ತಂಡವನ್ನು ಗೆಲುವಿನ ದಡ ಸೇರಿಸಿದರು. ನೆಹಾಲ್ ವಧೇರ 10 ರನ್ ಗಳಿಸಿದರು.

ಒಟ್ಟಾರೆ ಪಂಜಾಬ್ ಕಿಂಗ್ಸ್ ತಂಡ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿ 5 ವಿಕೆಟ್‌ಗಳ ಜಯ ಸಾಧಿಸಿತು.

ಚೆನ್ನೈ ಪರ ಬೌಲಿಂಗ್‌ನಲ್ಲಿ ಮ್ಯಾಟ್ ಹೆನ್ರಿ ಹಾಗೂ ಅನ್ಶುಲ್ ಕಂಬೋಜ್ ತಲಾ 2 ವಿಕೆಟ್‌ಗಳನ್ನು ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು