ಮಂಗಳೂರು : ಕಲ್ಮಡ್ಕದ ಬೊಮೆಟ್ಟಿ ಎಂಬಲ್ಲಿ ವಿದ್ಯುತ್ ಶಾಕ್ (Electric Shock) ತಗುಲಿ ಇಬ್ಬರು ಯುವಕರು ದುರ್ಮರಣಕ್ಕೀಡಾಗಿರುವ ಅತ್ಯಂತ ಶೋಚನೀಯ ಘಟನೆ ನಿನ್ನೆ ರಾತ್ರಿ ಒಂದು ಗಂಟೆಯ ಸುಮಾರಿಗೆ ಸಂಭವಿಸಿದೆ. ಈ ಅನಾಹುತದಲ್ಲಿ ಸ್ಥಳದಲ್ಲೇ ಇಬ್ಬರು ಯುವಕರು ಪ್ರಾಣಬಿಟ್ಟಿದ್ದು, ಮತ್ತೋರ್ವ ಬಾಲಕ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಬೊಮೆಟ್ಟಿ ನಿವಾಸಿಗಳಾದ ಗಣೇಶ್ ಹಾಗೂ ಭರತ್ ಎಂಬ ಯುವಕರು ವಿದ್ಯುತ್ ಆಘಾತದಿಂದ ದುರ್ಮರಣಕ್ಕೀಡಾಗಿದ್ದಾರೆ. ಬೊಮೆಟ್ಟಿ ಪ್ರದೇಶದಲ್ಲಿ ನಿನ್ನೆ ರಾತ್ರಿ ಸುಮಾರು 1:00 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಈ ಅಪಘಾತದಲ್ಲಿ ಮೃತರಲ್ಲದೆ ಮತ್ತೋರ್ವ ಬಾಲಕನಿಗೂ ಗಾಯಗಳಾಗಿದ್ದು, ಆತನಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ವೇಳೆ ಅನಿರೀಕ್ಷಿತವಾಗಿ ಸಂಭವಿಸಿದ ಈ ವಿದ್ಯುತ್ ಅವಘಾತದಿಂದ ಬೊಮೆಟ್ಟಿ ಗ್ರಾಮದಲ್ಲಿ ತೀವ್ರ ಶೋಕಮೂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

