ಸಿಎಂ ಡಿಕೆ ಶಿವಕುಮಾರ್ ಸಂಪುಟದ ಖಾತೆ ಹಂಚಿಕೆ ಕಗ್ಗಂಟು ಬಗೆಹರಿದಿದೆ!: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಸಚಿವರ ಕಂಪ್ಲೀಟ್ ಲಿಸ್ಟ್!

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಖಾತೆ ಹಂಚಿಕೆಯ ಕಗ್ಗಂಟು ಕೊನೆಗೂ ಬಗೆಹರಿದಿದೆ. ಕೆಲ ಆಂತರಿಕ ಗೊಂದಲ ಹಾಗೂ ಸುದೀರ್ಘ ಚರ್ಚೆಗಳ ನಡುವೆಯೂ ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟದ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ವಿವರ:ನೂತನ ಸಚಿವ ಸಂಪುಟದ ಪ್ರಮುಖ ಖಾತೆಗಳ ಹಂಚಿಕೆಯ ಪಟ್ಟಿ ಈ ಕೆಳಗಿನಂತಿದೆ: ಸಚಿವರ ಹೆಸರುಹಂಚಿಕೆಯಾಗಿರುವ ಪ್ರಮುಖ ಖಾತೆಗಳು / ಇಲಾಖೆಗಳು

ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ): ಹಣಕಾಸು ಇಲಾಖೆ, DPAR ಮತ್ತು ಇತರೆ ಎಲ್ಲಾ ಹಂಚಿಕೆಯಾಗದ ಖಾತೆಗಳು

ಡಾ. ಜಿ. ಪರಮೇಶ್ವರ್ (ಉಪಮುಖ್ಯಮಂತ್ರಿ): ಕಂದಾಯ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ

ಪ್ರಿಯಾಂಕ್ ಖರ್ಗೆ: ಗೃಹ ಇಲಾಖೆ ಹಾಗೂ ಐಟಿ-ಬಿಟಿ (IT-BT) ಇಲಾಖೆ

ಎಂ.ಬಿ. ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ

ಸತೀಶ್ ಜಾರಕಿಹೊಳಿ: ಲೋಕೋಪಯೋಗಿ ಇಲಾಖೆ (PWD)

ಕೃಷ್ಣ ಬೈರೇಗೌಡ: ಬೆಂಗಳೂರು ನಗರಾಭಿವೃದ್ಧಿ (ಜಿಬಿಎ)

ರಾಮಲಿಂಗಾರೆಡ್ಡಿ: ಜಲಸಂಪನ್ಮೂಲ ಇಲಾಖೆ

ಕೆ.ಹೆಚ್. ಮುನಿಯಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಭೈರತಿ ಸುರೇಶ್: ಸಾರಿಗೆ ಇಲಾಖೆ

ಯು.ಟಿ. ಖಾದರ್ : ಆರೋಗ್ಯ ಇಲಾಖೆ

ಡಾ. ಯತೀಂದ್ರ ಸಿದ್ದರಾಮಯ್ಯ: ನಗರಾಭಿವೃದ್ಧಿ ಇಲಾಖೆ

ಶರಣಪ್ರಕಾಶ್ ಪಾಟೀಲ್: ವೈದ್ಯಕೀಯ ಶಿಕ್ಷಣ ಇಲಾಖೆ

ಈಶ್ವರ್ ಖಂಡ್ರೆ: ಗ್ರಾಮೀಣಾಭಿವೃದ್ಧಿ ಇಲಾಖೆ

ಇದನ್ನೂ ಓದಿ: ಮೊದಲ ಸಂಪುಟ ಸಭೆಯಲ್ಲೇ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ ಸೇರಿದಂತೆ 6 ಮಹತ್ವದ ಘೋಷಣೆ!

ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲೆಗಳ ಪ್ರತಿ ಸಮಸ್ಯೆಯನ್ನು ಕಟ್ಟುನಿಟ್ಟಾಗಿ ಪಟ್ಟಿ ಮಾಡಿ 25 ದಿನಗಳ ಒಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ. ಇದರೊಂದಿಗೆ ಪಾರದರ್ಶಕ ಕೆಲಸಕ್ಕೆ ಆದ್ಯತೆ ನೀಡಲು ಸೂಚಿಸಿರುವ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಹೊಸ ರೌಡಿ ನಿಗ್ರಹ ತಂಡ ರಚನೆಗೂ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು