ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮ ವಲಸಿಗರನ್ನು ಬೆರಳು ಮಾಡಿ ತೋರಿಸಿದ್ದ ನಾಗೇಂದ್ರಪ್ಪ ಟಿ. (ಅಲಿಯಾಸ್ ನಾಗೇಂದ್ರ) ಎಂಬುವವರ ವಿರುದ್ಧವೇ ಪ್ರಕರಣ ದಾಖಲಿಸಿ ಬಂಧಿಸಿದ್ದ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳದೆ ದೂರುದಾರರನ್ನೇ ಬಂಧಿಸಿರುವುದನ್ನು ಕಟುವಾಗಿ ವಿಮರ್ಶಿಸಿದ್ದು, ರಾಜ್ಯ ಗೃಹ ಇಲಾಖೆಯ ಕರ್ತವ್ಯ ಲೋಪವನ್ನು ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ಅಪಾರ್ಟ್ಮೆಂಟ್ ಪ್ರಕೋಷ್ಠಕ್ಕೆ ಪದಾಧಿಕಾರಿಗಳ ನೇಮಕ: ಬಿ.ವೈ. ವಿಜಯೇಂದ್ರ ಆದೇಶ
ನಗರದಲ್ಲಿ ಅಕ್ರಮ ವಲಸಿಗರು ಅಣಬೆಗಳಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಅದನ್ನು ಬೆರಳು ಮಾಡಿ ತೋರಿಸಿದ ದೂರುದಾರರನ್ನೇ ಬಂಧಿಸುವುದು ದೇಶದ ಆಂತರಿಕ ಭದ್ರತೆಗೆ ತೀವ್ರ ಆತಂಕ ಹಾಗೂ ಅಪಾಯವನ್ನು ತಂದೊಡ್ಡಲಿದೆ” ಎಂದು ಪೀಠ ಕಳವಳ ವ್ಯಕ್ತಪಡಿಸಿತು.
ಬೇರೆ ಬೇರೆ ವಿಷಯಗಳ ಬಗ್ಗೆ ಮಾತು ಮತ್ತು ಭಾಷಣ ಮಾಡುವುದಲ್ಲ. ಮೊದಲು ಅಕ್ರಮ ವಲಸೆಯನ್ನು ನಿಯಂತ್ರಿಸಲು ಪೊಲೀಸರಿಗೆ ಹೇಳಿ. ಗೃಹ ಇಲಾಖೆ ಏನು ಮಾಡುತ್ತಿದೆ? ಅವರು ಬೇರೆ ಕೆಲಸ/ಭಾಷಣಗಳಲ್ಲೇ ತಲ್ಲೀನರಾಗಿದ್ದಾರೆಯೇ?” ಎಂದು ಹೈಕೋರ್ಟ್ ಅತ್ಯಂತ ಖಾರವಾಗಿ ಪ್ರಶ್ನಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

