ಮಗುವಿನ ಮೊದಲ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್-ವಿಕ್ಕಿ ಕೌಶಲ್; ಹೇಸರೇನು?

Katrina Kaif-Vicky Kaushal share first photo of baby

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಗಂಡು ಮಗುವಿನ ಮೊದಲ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಜೊತೆಗೆ, ತಮ್ಮ ಮಗನ ಹೆಸರು ವಿಹಾನ್ ಕೌಶಲ್ ಎಂದೂ ಬಹಿರಂಗಪಡಿಸಿದ್ದಾರೆ. ದಂಪತಿಗೆ ನ.7 ರಂದು ಗಂಡು ಮಗು ಜನಿಸಿತ್ತು.

ಕತ್ರಿನಾ ಮತ್ತು ವಿಕಿ ದಂಪತಿ ತನ್ನ ಮಗುವಿನ ಪುಟ್ಟ ಕೈಗಳ ಫೋಟೋ ಹಂಚಿಕೊಂಡಿದ್ದಾರೆ. ಮಗುವಿನ ಪುಟ್ಟ ಕೈಯನ್ನು ಇಬ್ಬರು ಹಿಡಿದಿರುವುದನ್ನು ಫೋಟೋದಲ್ಲಿ ಕಾಣಬಹುದು. ಫೋಟೋ ಹಂಚಿಕೊಂಡ ದಂಪತಿಗಳು ಜಂಟಿ ಪೋಸ್ಟ್‌ನಲ್ಲಿ “ನಮ್ಮ ಬೆಳಕಿನ ಕಿರಣ ವಿಹಾನ್ ಕೌಶಲ್ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದೆ ಜೀವನ ಸುಂದರವಾಗಿದೆ, ನಮ್ಮ ಜಗತ್ತು ಕ್ಷಣಾರ್ಧದಲ್ಲಿ ಬದಲಾಗುತ್ತದೆ, ಪದಗಳಿಗೆ ಮೀರಿದ ಕೃತಜ್ಞತೆ” ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Katrina Kaif (@katrinakaif)

ಇದನ್ನೂ ಓದಿ: ಬಾರ್ಡರ್ 2 ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತಾ? ಪಾಕ್‌ನಲ್ಲೂ ಸನ್ನಿ ಡಿಯೋಲ್‌ ಫ್ಯಾನ್ಸ್!‌ ವರುಣ್‌ ಧವನ್‌ ಹೇಳಿದ್ದೇನು?

ಕತ್ರಿನಾ ಮತ್ತು ವಿಕ್ಕಿ ಕುಟುಂಬಗಳು ಮತ್ತು ಉದ್ಯಮದ ಸಹೋದ್ಯೋಗಿಗಳು ದಂಪತಿಗೆ ಶುಭ ಹಾರೈಸಿದ್ದಾರೆ. ವಿಕ್ಕಿ ಕೌಶಲ್ ಅವರ ತಂದೆ ಶಾಮ್ ಕೌಶಲ್ ಅವರು ಮೊಮ್ಮಗನಿಗೆ ಶುಭ ಆಶೀರ್ವಾದಗಳನ್ನು ತಿಳಿಸಿದ್ದಾರೆ.  ಪರಿಣಿತಿ ಚೋಪ್ರಾ “ಚಿಕ್ಕ ಗೆಳೆಯ!” ಎಂದು ಪೋಸ್ಟ್ ಮಾಡಿದ್ದಾರೆ. “ದೇವರು ಆಶೀರ್ವಾದ ಮಾಡಲಿ!! ಸ್ವಾಗತ ವಿಹಾನ್, ಅಭಿನಂದನೆಗಳು” ಎಂದು ಹೃತಿಕ್ ರೋಷನ್ ಹೇಳಿದ್ದಾರೆ. ಹೀಗೆ ಅನೇಕ ನಟ ನಟಿಯರು ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು