ದೆಹಲಿ: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ನೀತಿಗೆ ಸಾಕ್ಷಿಯಾಗುವಂತಹ ಅತ್ಯಂತ ನೋವಿನ ಸಂಗತಿಯೊಂದು ಬೆಳಕಿಗೆ ಬಂದಿದೆ. ಜೀವ ರಕ್ಷಕ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಂತೆ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯೊಬ್ಬರು, ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಲೇ ಇತ್ತೀಚೆಗೆ ಕೊನೆಯುಸಿರೆಳೆದಿದ್ದಾರೆ.
ಕಳೆದ 2022ರಲ್ಲಿ ಆಕೆ ದಾಖಲಿಸಿದ್ದ ಅರ್ಜಿಯು ಇಂದಿಗೂ ಕೋರ್ಟ್ ಕಡತಗಳ ಮಧ್ಯೆ ಧೂಳು ಹಿಡಿಯುತ್ತಿದ್ದು, ಬರೋಬ್ಬರಿ 4 ವರ್ಷಗಳ ಅವಧಿಯಲ್ಲಿ 57 ಬಾರಿ ವಿಚಾರಣೆ ನಡೆದಿದ್ದರೂ ಆಕೆಗೆ ಬದುಕಿದ್ದಾಗ ನ್ಯಾಯ ಸಿಗಲೇ ಇಲ್ಲ.
ಮಹಿಳೆಯು ಸ್ತನ ಕ್ಯಾನ್ಸರ್ನ ಅತ್ಯಂತ ವೇಗವಾಗಿ ಹರಡುವ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಆಕೆಯ ಚಿಕಿತ್ಸೆಗೆ ತಿಂಗಳಿಗೆ ಸುಮಾರು 1.5 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು. ಆಕೆಗೆ ರಿಬೊಸಿಕ್ಲಿಬ್ ಹಾಗೂ ಅಬೆಮಾಸಿಕ್ಲಿಬ್ ಎಂಬ ಔಷಧಿಗಳು ಬೇಕಿತ್ತು. ರಿಬೊಸಿಕ್ಲಿಬ್ನ ಬೆಲೆ ತಿಂಗಳಿಗೆ ಬರೋಬ್ಬರಿ 78,468 ರೂಪಾಯಿಗಳು ಮತ್ತು ಅಬೆಮಾಸಿಕ್ಲಿಬ್ ಬೆಲೆ ತಿಂಗಳಿಗೆ 47,752 ರೂ.ನಿಂದ ಹಿಡಿದು 95,504 ರೂಪಾಯಿಗಳಷ್ಟಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಸರಣಿ ನರಮೇಧ: ಪೋಕ್ಸೋ ಕೇಸ್ ಹಾಕಿದ್ದಕ್ಕೆ ಅಪ್ರಾಪ್ತೆ ಕುಟುಂಬ ಸೇರಿ 6 ಜನರ ಭೀಕರ ಕೊಲೆ ಮಾಡಿದ ಸೈಕೋ ಪತಿ
ಸಾಮಾನ್ಯ ಕುಟುಂಬದ ಈ ಮಹಿಳೆ, ಭಾರತದಲ್ಲೇ ಈ ಜೀವ ರಕ್ಷಕ ಔಷಧಿಗಳನ್ನು ಕಡಿಮೆ ಬೆಲೆಗೆ ಉತ್ಪಾದಿಸಲು ಅನುಮತಿ ನೀಡುವಂತಹ ಕಾನೂನನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯ ಸಿಗುವ ಮುನ್ನವೇ ಆಕೆಯ ಜೀವ ಪಕ್ಷಿ ಹಾರಿಹೋಗಿದೆ.
ಅರ್ಜಿ ಸಲ್ಲಿಸಿದ ಮಹಿಳೆ ಇಂದು ಬದುಕಿಲ್ಲದಿದ್ದರೂ ಆಕೆ ಆರಂಭಿಸಿದ ಹೋರಾಟ ಇನ್ನು ನಿಂತಿಲ್ಲ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಜ್ಯೋತ್ಸ್ನಾ ಸಿಂಗ್ ಮತ್ತು ಕೆ.ಎಂ. ಗೋಪಕುಮಾರ್ ಎಂಬ ಇಬ್ಬರು ಸಾಮಾಜಿಕ ಹೋರಾಟಗಾರರು, ತಕ್ಷಣವೇ ಇದರ ವಿಚಾರಣೆ ನಡೆಸುವಂತೆ ಕೇರಳ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಇದೇ ಪತ್ರದ ಪ್ರತಿಗಳನ್ನು ದೇಶದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ (CJI) ಸೂರ್ಯ ಕಾಂತ್ ಅವರಿಗೂ ರವಾನಿಸಲಾಗಿದೆ.
ದೇಶವನ್ನು ಕಾಡುತ್ತಿದೆ ಸ್ತನ ಕ್ಯಾನ್ಸರ್ ಭೀತಿ:
| ಸ್ತನ ಕ್ಯಾನ್ಸರ್ ಅಂಕಿ-ಅಂಶಗಳು (ಭಾರತ) | ವಿವರ |
| 2022ರ ಹೊಸ ಪ್ರಕರಣಗಳು | ಅಂದಾಜು 1.9 ಲಕ್ಷ ಮಹಿಳೆಯರು |
| 2022ರ ಸಾವುಗಳು | 98,337 ಮಹಿಳೆಯರು ಜಲಸಮಾಧಿ |
| 2026ರ ಸಂಭವನೀಯತೆ (ಸಂಸತ್ತಿನ ವರದಿ) | ಪ್ರಕರಣಗಳ ಸಂಖ್ಯೆ 2.4 ಲಕ್ಷಕ್ಕೆ ಏರಿಕೆ ಸಾಧ್ಯತೆ |
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

