ಪ್ಯಾಂಗ್ಯಾಂಗ್ : ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅವರು ಮೆದುಳಿನ ರಕ್ತಸ್ರಾವದಿಂದ (Brain Haemorrhage) ಬಳಲುತ್ತಿದ್ದು, ಕೋಮಾದಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹಾಗೂ ವಿಶ್ವಾಸಾರ್ಹ ಪುರಾವೆಗಳು ಲಭ್ಯವಿಲ್ಲ.
ಪ್ಯಾಂಗ್ಯಾಂಗ್ನಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಕಿಮ್ ಜಾಂಗ್ ಉನ್ ಅವರನ್ನು ತುರ್ತು ಚಿಕಿತ್ಸೆಗಾಗಿ ಚೀನಾದ ಬೀಜಿಂಗ್ನಲ್ಲಿರುವ ಪೆಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜ್ಗೆ (Peking Union Medical College) ಕರೆದೊಯ್ಯಲಾಗಿದೆ ಎಂದು ಸೋಶಿಯಲ್ ಮೀಡಿಯಾ ಊಹಾಪೋಹಗಳಲ್ಲಿ ಹೇಳಲಾಗುತ್ತಿದೆ. ಉತ್ತರ ಕೊರಿಯಾ ವಿಶ್ಲೇಷಕ ಬೆನೆಡಿಕ್ಟ್ ರೋಜರ್ಸ್ (Benedict Rogers) ಮಾತನಾಡಿ, “ಉತ್ತರ ಕೊರಿಯಾದಲ್ಲಿ ನಾಯಕನಿಗೆ ನಿಜಕ್ಕೂ ಅನಾರೋಗ್ಯ ಉಂಟಾದರೆ ಅಥವಾ ಸಾವನ್ನಪ್ಪಿದರೆ ಅಲ್ಲಿ ಸಾರ್ವಜನಿಕವಾಗಿ ತೀವ್ರ ಶೋಕ ವ್ಯಕ್ತಪಡಿಸುವ ವಾಡಿಕೆಯಿದೆ. ಆದರೆ ಅಂತಹ ಯಾವುದೇ ಲಕ್ಷಣಗಳು ಸದ್ಯ ಕಂಡುಬಂದಿಲ್ಲ” ಎಂದು ತಿಳಿಸಿದ್ದಾರೆ. ಈ ಹಿಂದೆ 2020ರಲ್ಲೂ ಇದೇ ರೀತಿಯ ಸುಳ್ಳು ವದಂತಿಗಳು ಹಬ್ಬಿದ್ದವು ಎಂಬುದನ್ನು ಅವರು ಸ್ಮರಿಸಿದ್ದಾರೆ.
ಕಿಮ್ ಅವರ ಸಹೋದರಿ ಹಾಗೂ ಪ್ರಭಾವಿ ನಾಯಕಿಯಾಗಿರುವ 38 ವರ್ಷ ವಯಸ್ಸಿನ ಕಿಮ್ ಯೋ-ಜೋಂಗ್ ಅವರ ಹೆಸರು ತುರ್ತು ಉತ್ತರಾಧಿಕಾರಿಯಾಗಿ ಆಗಾಗ್ಗೆ ಮುಂಚೂಳಿಗೆ ಬರುತ್ತದೆ. ಕಿಮ್ ಅವರ 13 ವರ್ಷದ ಮಗಳು ಕಿಮ್ ಜು-ಎ ಇತ್ತೀಚೆಗೆ ಹಲವು ಉನ್ನತ ಮಟ್ಟದ ಸಮಾರಂಭಗಳಲ್ಲಿ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಭವಿಷ್ಯದ ನಾಯಕತ್ವದ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೂ ಅವರನ್ನು ಇದುವರೆಗೆ ಅಧಿಕೃತ ಉತ್ತರಾಧಿಕಾರಿಯಾಗಿ ಘೋಷಿಸಲಾಗಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

