Breaking News

ಮಲ್ಲಿಗೆಯ ರಾಶಿಯಲ್ಲಿ ಪೆರುವಾಜೆ ಜಲದುರ್ಗೆ ದೇವಿಯ ನೋಡಿರೇ.. ಫೋಟೋಗಳು ಇಲ್ಲಿವೆ

Jaladurge in a pile
ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗೆ ದೇವಸ್ಥಾನದ ಜಾತ್ರಾಮಹೋತ್ಸವವ ವೈಭವದಿಂದ ನಡೆಯಿತು.
ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಪ್ರತಿ ವರ್ಷವೂ ಜಲದುರ್ಗೆಗೆ ಮಲ್ಲಿಗೆ ಅರ್ಪಿಸಲಾಗುತ್ತದೆ. ಪ್ರತಿ ವರ್ಷವೂ ದೇವಿಗೆ ಅರ್ಪಿಸುವ‌ ಮಲ್ಲಿಗೆಯ ರಾಶಿ ಹೆಚ್ಚುತ್ತಲೇ ಇದೆ ಎನ್ನಲಾಗುತ್ತಿದೆ. ಅದಾಗ್ಯೂ, ಇತ್ತೀಚೆಗೆ ನಡೆದ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಭಾರಿ ಪ್ರಮಾಣದಲ್ಲಿ ಮಲ್ಲಿಗೆಯನ್ನು ಅರ್ಪಿಸಲಾಗಿದ್ದು, ಗರ್ಭಗುಡಿಯೊಳಗೆ ಮಲ್ಲಿಗೆಯ ರಾಶಿಯೇ ಕಾಣಿಸುತ್ತಿತ್ತು. ಈ ರಾಶಿಯಲ್ಲಿ ಕುಳಿತಿಹ ಜಲದುರ್ಗೆಯ ನೋಡಿ ಕಣ್ತುಂಬಿಕೊಂಡರು
22 ಗ್ರಾಮಗಳಿಗೆ ಸೇರಿದ ಮಾಗಣೆ ಕ್ಷೇತ್ರದಲ್ಲಿ ನಡೆದ ಈ ಅದ್ದೂರಿ ಜಾತ್ರೋತ್ಸವವನ್ನು 15 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾದರು. ಇದೇ ವೇಳೆ ಅನ್ನಸಂತರ್ಪಣೆಯೂ ನೆರವೇರಿತು.
ರಥಬೀದಿಯಲ್ಲಿ ಬ್ರಹ್ಮರಥೋತ್ಸವಕ್ಕೂ ಮುನ್ನ 750 ಮಂದಿಯಿಂದ ಏಕಕಾಲದಲ್ಲಿ ನಡೆದ ನೃತ್ಯ ಭಜನೆ ನೋಡುಗರ ಕಣ್ಮನ ಸೆಳೆದವು.
« of 2 »

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು