ಕಡಜದ ಗೂಡು ತೆಗೆಯಲು ಹೋಗಿ ನೂರಾರು ಪಿಲಿಕುಡೋಲ್ ದಾಳಿಗೆ ತುತ್ತಾದ ವ್ಯಕ್ತಿ

ನಾವು ಪ್ರಕೃತಿಯನ್ನು ಅಥವಾ ಅದರಲ್ಲಿರುವ ಜೀವಿಗಳನ್ನು ಎಂದಿಗೂ ತೊಂದರೆ ನೀಡಬಾರದು. ಸಣ್ಣದೊಂದು ಬೇಜವಾಬ್ದಾರಿತನ ನಿರ್ಧಾರವು ಎಷ್ಟು ದೊಡ್ಡ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕಡಜ ಗೂಡನ್ನು (Wasp Nest) ತೆಗೆಯಲು ಹೋಗಿ ವ್ಯಕ್ತಿಯೊಬ್ಬರು ನೂರಾರು ಕಡಜಗಳ ಭೀಕರ ದಾಳಿಗೆ ತುತ್ತಾಗಿ ತೀವ್ರ ಗಾಯಗೊಂಡಿದ್ದಾರೆ. ಇದನ್ನು ತುಳುವಿನಲ್ಲಿ ಪಿಲಿಕುಡೋಲ್ ಗೂಡು ಎಂದು ಕರೆಯುತ್ತಾರೆ. ಇನ್ನು ಘಟನೆ ಎಲ್ಲಿ ಆಗಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

ಮನೆಯ ಸಮೀಪವಿದ್ದ ಕಡಜದ ಗೂಡಿನಿಂದ ತೊಂದರೆಯಾಗುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು, ಯಾವುದೇ ಮುನ್ನೆಚ್ಚರಿಕೆ ಅಥವಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅದನ್ನು ಸ್ವತಃ ತಾವೇ ತೆಗೆಯಲು ಮುಂದಾಗಿದ್ದಾರೆ. ಆದರೆ, ಗೂಡನ್ನು ಕಿತ್ತು ದೂರ ಎಸೆಯಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಅವರು ಕೆಳಗೆ ಬಿದ್ದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:


ವ್ಯಕ್ತಿ ಕೆಳಗೆ ಬೀಳುತ್ತಿದ್ದಂತೆ ಕೆರಳಿದ ನೂರಾರು ಕಡಜಗಳ ಹಿಂಡು ಒಮ್ಮೆಗೇ ಅವರ ಮೇಲೆ ಮುಗಿಬಿದ್ದಿದೆ. ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ವ್ಯಕ್ತಿಯು ದೇಹದಾದ್ಯಂತ ಕಡಜಗಳ ಭೀಕರ ಕಡಿತಕ್ಕೆ ಒಳಗಾಗಿದ್ದಾರೆ. ತೀವ್ರ ನೋವಿನಿಂದ ನರಳಾಡುತ್ತಿದ್ದ ಅವರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಪುಣ್ಯಕ್ಷೇತ್ರದಲ್ಲೂ ಮುಗಿಯದ ರೀಲ್ಸ್ ಹಾವಳಿ: ದೇವಸ್ಥಾನದೊಳಗೆ ಕುಣಿಯುತ್ತಿದ್ದ ಯುವತಿಯನ್ನು ಓಡಿಸಿದ ಪೊಲೀಸ್; ವಿಡಿಯೋ ವೈರಲ್

ಈ ಘಟನೆಯು ನಮಗೆಲ್ಲರಿಗೂ ಒಂದು ದೊಡ್ಡ ಪಾಠವಾಗಿದೆ. ಇಂತಹ ಅಪಾಯಕಾರಿ ಕೀಟಗಳ ಗೂಡುಗಳನ್ನು ತೆರವುಗೊಳಿಸುವಾಗ ತಜ್ಞರ ಸಹಾಯ ಪಡೆಯಬೇಕು. ತಂತ್ರಜ್ಞಾನ ಮತ್ತು ಸುರಕ್ಷತಾ ಗೇರ್‌ಗಳನ್ನು ಬಳಸದೆ ಸಾಹಸಕ್ಕೆ ಕೈಹಾಕಿದರೆ ಜೀವಕ್ಕೆ ಕಂಟಕ ಎದುರಾಗಬಹುದು. ಯಾವುದೇ ಕೆಲಸ ಮಾಡುವಾಗಲೂ “ಸುರಕ್ಷತೆಯೇ ಮೊದಲು” ಎಂಬುದನ್ನು ಮರೆಯಬಾರದು.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *