ಪುತ್ತೂರು: ಟ್ರಕ್ ಟೈರ್ ಪರಿಶೀಲನೆ ವೇಳೆ ಇಬ್ಬರಿಗೆ ಉದ್ಯಮಿಯ ಆಡಿ ಕಾರು ಡಿಕ್ಕಿ; ಓರ್ವನ ಸ್ಥಿತಿ ಗಂಭೀರ

Puttur Accident

ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಲ್ಲಿಸಿದ್ದ ಟ್ರಕ್‌ನ ಟೈರ್ ಪರಿಶೀಲಿಸುತ್ತಿದ್ದ ಇಬ್ಬರಿಗೆ ಮಂಗಳೂರಿನ ಉದ್ಯಮಿಯೊಬ್ಬರ ಆಡಿ ಕಾರು ಡಿಕ್ಕಿಯಾದ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿ ಎಂದು ವರದಿಯಾಗಿದೆ.

ಇಚ್ಲಂಪಾಡಿ ಗ್ರಾಮದ ಕೊರಮೇರು ಸಮೀಪ ಶುಕ್ರವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ನಿವಾಸಿ ಶೇಖ್ ಬುಡಾನ್ (53) ಎಂದು ಗುರುತಿಸಲಾಗಿದೆ.

Advertisement

ಮಾಹಿತಿಯ ಪ್ರಕಾರ, ಹಾಸನದಿಂದ ಮಂಗಳೂರಿನತ್ತ ಉಕ್ಕಿನ ರಾಡುಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ಆರ್.ಎ. ಮೊಹಮ್ಮದ್ ಅವರು ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಟೈರ್ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಸಹಚಾಲಕ ಶೇಖ್ ಬುಡಾನ್ ಕೂಡ ಅವರ ಹಿಂಭಾಗದಲ್ಲಿ ನಿಂತಿದ್ದರು.

ಇದನ್ನೂ ಓದಿ: ‘ಚಾಮುಂಡಿ ದೈವ’ದ ವ್ಯಂಗ್ಯ ಅನುಕರಣೆ ಪ್ರಕರಣ ಇತ್ಯರ್ಥ: ದೇವರ ಮುಂದೆ ನಿಂತು ರಣವೀರ್ ಸಿಂಗ್ ಕ್ಷಮಾಪಣೆಗೆ ಕರ್ನಾಟಕ ಹೈಕೋರ್ಟ್ ಡೆಡ್ ಲೈನ್

Advertisement

ಅದೇ ಸಮಯದಲ್ಲಿ ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಇಬ್ಬರಿಗೂ ಡಿಕ್ಕಿ ಹೊಡೆದಿದೆ.  ಕಾರು ಮಂಗಳೂರಿನ ಉದ್ಯಮಿ ರಂಜನ್ ಅವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶೇಖ್ ಬುಡಾನ್ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಚಾಲಕ ಮೊಹಮ್ಮದ್ ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು