IPL: ಶಾರ್ದೂಲ್ ಬೌಲಿಂಗ್ ಕಮಾಲ್, ತಿಲಕ್ ಬ್ಯಾಟಿಂಗ್ ಅಬ್ಬರಕ್ಕೆ ಮಣಿದ ಪಂಜಾಬ್, ಗೆದ್ದ ಮುಂಬೈ

ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು. ತಂಡದ ಪರ ಪ್ರಭ್‌ಸಿಮ್ರನ್ ಸಿಂಗ್ ಆಕರ್ಷಕ ಅರ್ಧಶತಕ ಸಿಡಿಸಿ 57 ರನ್ ಗಳಿಸಿದರು.

ಪ್ರಿಯಾಂಶ್ ಆರ್ಯ 22, ಕೂಪರ್ ಕಾನೋಲಿ 21, ಅಜ್ಮತುಲ್ಲಾ ಒಮರ್ಜೈ 38 ಹಾಗೂ ಜೇವಿಯರ್ ಬಾರ್ಟ್ಲೆಟ್ ಅಜೇಯ 18 ರನ್‌ಗಳ ಕೊಡುಗೆ ನೀಡಿದರು. ಶ್ರೇಯಸ್ ಅಯ್ಯರ್ 4, ಸೂರ್ಯಾಂಶ್ ಶೆಡ್ಜ್ 8 ಹಾಗೂ ಶಶಾಂಕ್ ಸಿಂಗ್ 2 ರನ್‌ಗೆ ನಿರ್ಗಮಿಸಿ ನಿರಾಸೆ ಮೂಡಿಸಿದರು.

ಮುಂಬೈ ಪರ ಶಾರ್ದೂಲ್ ಠಾಕೂರ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 4 ವಿಕೆಟ್ ಕಬಳಿಸಿ ಪಂಜಾಬ್ ಬ್ಯಾಟಿಂಗ್ ಪಡೆಗೆ ದೊಡ್ಡ ಹೊಡೆತ ನೀಡಿದರು. ದೀಪಕ್ ಚಹಾರ್ 2 ವಿಕೆಟ್ ಪಡೆದರೆ, ರಾಜ್ ಬಾವಾ ಮತ್ತು ಕಾರ್ಬಿನ್ ಬಾಷ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: IPL: ಆರ್‌ಸಿಬಿ ಪಾಲಿನ ಕಿಂಗ್ ಕೊಹ್ಲಿ ಶತಕ, ಕೆಕೆಆರ್‌ಗೆ ಸೋಲು

201 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ 48 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ರೋಹಿತ್ ಶರ್ಮಾ 25 ರನ್ ಸೇರಿಸಿದರು.

ಆದರೆ ತಂಡದ ಗೆಲುವಿನ ಶಿಲ್ಪಿಯಾಗಿದ್ದ ತಿಲಕ್ ವರ್ಮಾ ಕೇವಲ 33 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಸಿಡಿಸಿ ಪಂದ್ಯವನ್ನು ಮುಂಬೈ ಪರ ತಿರುಗಿಸಿದರು. ಕೊನೆಯಲ್ಲಿ ವಿಲ್ ಜ್ಯಾಕ್ಸ್ ಅಜೇಯ 28 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶೆರ್ಫೇನ್ ರುದರ್ಫೋರ್ಡ್ 20 ಹಾಗೂ ನಮನ್ ಧೀರ್ 9 ರನ್ ಗಳಿಸಿದರು.

ಪಂಜಾಬ್ ಪರ ಅಜ್ಮತುಲ್ಲಾ ಒಮರ್ಜೈ 2 ವಿಕೆಟ್ ಪಡೆದರೆ, ಯಜುವೇಂದ್ರ ಚಾಹಲ್ ಮತ್ತು ಮಾರ್ಕೊ ಜಾನ್ಸೆನ್ ತಲಾ ಒಂದು ವಿಕೆಟ್ ಕಬಳಿಸಿದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು