MRPLನಲ್ಲಿ ಈ ಸ್ಫೋಟ ಸಂಭವಿಸಲು ಕಾರಣವೇನು? ಈಗ ಪರಿಸ್ಥಿತಿ ಹೇಗಿದೆ?

ಮಂಗಳೂರು: ಮಂಗಳೂರಿನ ಜೋಕಟ್ಟೆ ಸಮೀಪವಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಕಚ್ಚಾ ತೈಲ ಶುದ್ಧೀಕರಣ ಘಟಕದಲ್ಲಿ ಭಾರಿ ಬಾಯ್ಲರ್ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಅಲ್ಲಿನ ಮೂಲಗಳು ತಿಳಿಸಿರುವ ಪ್ರಕಾರ, ಕಚ್ಚಾ ತೈಲ ಶುದ್ಧೀಕರಣ ವಿಭಾಗದ ಬಾಯ್ಲರ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಆರಂಭದಲ್ಲಿ ಘಟಕದೊಳಗೆ 9 ಜನರು ಸಿಲುಕಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ಪ್ರಸ್ತುತ 4 ಜನರನ್ನು ರಕ್ಷಿಸಲಾಗಿದ್ದು, ತಕ್ಷಣವೇ ಎಂಆರ್‌ಪಿಎಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಬರೋಬ್ಬರಿ 150 ಆಂಬುಲೆನ್ಸ್‌ಗಳನ್ನು ಸ್ಥಳದಲ್ಲೇ ಸಿದ್ಧವಾಗಿ ನಿಲ್ಲಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ನೀರು ಹಾರಿಸಿ ಬೆಂಕಿ ಶಮನಗೊಳಿಸಲು ಯತ್ನಿಸುತ್ತಿದ್ದರೂ, ಬೆಂಕಿಯ ಸಣ್ಣ ಜ್ವಾಲೆಗಳು ಇನ್ನೂ ಕಾಣಿಸಿಕೊಳ್ಳುತ್ತಿರುವುದು ಪರಿಸ್ಥಿತಿಯ ಸೂಕ್ಷ್ಮತೆಯನ್ನು ತೋರಿಸುತ್ತದೆ.

ಇದನ್ನೂ ಓದಿ: ಮಂಗಳೂರಿನ ಎಂಆರ್‌ಪಿಎಲ್ ಬಳಿ ಭೀಕರ ಸ್ಫೋಟ: ಜೋಕಟ್ಟೆಯಲ್ಲಿ ಅದುರಿದ ಮನೆಗಳು, ಉದುರಿದ ಕಿಟಕಿ-ಬಾಗಿಲು

ಎಂಆರ್‌ಪಿಎಲ್‌ನಂತಹ ಪ್ರಮುಖ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಈ ಘಟನೆಯು ಕೈಗಾರಿಕಾ ಸುರಕ್ಷತೆಯ (Industrial Safety) ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *