ಮುಂಡೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತನ ಸಹಕಾರಿ ಸಂಘದ ಸಭಾಭವನದಲ್ಲಿ ವಿವಿಧ ಸಂಘ-ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರ 2026ರ ಸಮಾರೋಪ ಸಮಾರಂಭವು ಏಪ್ರಿಲ್ 17ರ ಶುಕ್ರವಾರದಂದು ಬಹಳ ಸಂಭ್ರಮದಿಂದ ನೆರವೇರಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ವೆ, ಪ್ರಾಥಮಿಕ ಕೃಷಿ ಪತ್ತನ ಸಹಕಾರಿ ಸಂಘ ಮುಂಡೂರು ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಮುಂಡೂರು ಇವರ ಸಂಯುಕ್ತ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಶಿವನಾಥ ರೈ ಮೇಗಿನಗುತ್ತು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಶ್ರೀ ಅವಿನಾಶ್ ಕೊಡಂಕೀರಿ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಶ್ರೀ ಧನಂಜಯ ಕುಲಾಲ್, ಹಿರಿಯ ಆರೋಗ್ಯ ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಯೋಗ ಶಿಕ್ಷಕ ಶ್ರೀ ಅಶೋಕ್ ಅಂಬಟ ಭಾಗವಹಿಸಿದ್ದರು.

ಇದನ್ನೂ ಓದಿ: ರಾಜ್ಯದ ಜನತೆಗೆ ಕರಂಟ್ ಶಾಕ್: ಪ್ರತಿ ಯೂನಿಟ್ ವಿದ್ಯುತ್ ದರ 56 ಪೈಸೆ ಏರಿಕೆ; ಮೇ ತಿಂಗಳಿನಿಂದ ಹೊಸ ದರ ಜಾರಿ!
ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಶಿಬಿರದ ಕಲಿಕೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರದ ಯಶಸ್ಸಿಗೆ ಕಾರಣರಾದ ಯೋಗ ಶಿಕ್ಷಕ ಶ್ರೀ ಅಶೋಕ್ ಅಂಬಟ ಹಾಗೂ ಶಿಬಿರದ ನಿರ್ವಾಹಕ ಶ್ರೀ ಪ್ರಕಾಶ್ ಡಿಸೋಜಾ ಅವರಿಗೆ ಪೋಷಕರ ಪರವಾಗಿ ವಿಶೇಷ ಗೌರವ ಸಲ್ಲಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಕಥಾಪುಸ್ತಕಗಳನ್ನು ವಿತರಿಸುವ ಮೂಲಕ ಅವರ ಉತ್ಸಾಹವನ್ನು ಹೆಚ್ಚಿಸಲಾಯಿತು.

ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಪೌಷ್ಟಿಕ ಸತ್ವಾಹಾರದ ವ್ಯವಸ್ಥೆ ಮಾಡಲಾಗಿತ್ತು. ಆಹಾರ ತಯಾರಿಸಿದ ತಂಡವನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಸೋನಾಲಿ ರೈ ಪಿ ನಿರೂಪಿಸಿದರು. ಕು/ ಅನ್ವಿತಾ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಗುರುಪ್ರಸಾದ್ ಮುಂಡೂರು ಪ್ರಮಾಣಪತ್ರದ ಪಟ್ಟಿಯನ್ನು ವಾಚಿಸಿದರು. ಪೋಷಕರ ಪರವಾಗಿ ಶ್ರೀಮತಿ ಅನಿತಾ ರೈ ಹಾಗೂ ಶಿಬಿರಾರ್ಥಿಗಳ ಪರವಾಗಿ ಅದ್ವಿಕ್ ಹಾಗೂ ಜಾನ್ವಿನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

