‘ಆನೆ ಯಾವುದು ಎಂದು ಹೇಳದಿದ್ದರೆ, ನಾವು ಯಾಕೆ ಅಂಬಾರಿ ಕೊಡಬೇಕು?’: ರಾಜಮಾತೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ಗರಂ

ಮೈಸೂರು ದಸರಾ ಜಂಬೂಸವಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹಸ್ತಾಂತರಿಸುವ ವಿಚಾರ ಹಾಗೂ ಅಂಬಾರಿ ಹೊರಲಿರುವ ಗಜಪಡೆಯ ಆಯ್ಕೆಯ ಪ್ರಕ್ರಿಯೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ತಮ್ಮ ತೀವ್ರ ಆಕ್ರೋಶ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ದಸರಾ ಮಹೋತ್ಸವದ ಇತಿಹಾಸದಲ್ಲಿ ‘ಅರ್ಜುನ’ ಆನೆ ಸೃಷ್ಟಿಸಿದ್ದ ಆತಂಕದ ಘಟನೆಯನ್ನು ನೆನಪಿಸಿರುವ ಅವರು, ಅಂಬಾರಿಯ ಭದ್ರತೆ ಹಾಗೂ ಪರಂಪರೆಯ ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

Advertisement