ಕನೆ ಹಲಗೆ ವಿಭಾಗದಲ್ಲಿ ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ ಮತ್ತು ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಕೋಣಗಳು ಚಿನ್ನ ಗೆದ್ದುಕೊಂಡಿದ್ದು, ಇವುಗಳು 6.5 ಕೋಲು ನಿಶಾನೆಗೆ ನೀರು ಚಿಮ್ಮಿಸಿವೆ.
ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಕೋಣಗಳು ಪ್ರಥಮ, ಯೆರ್ಮಾಲು ಪುಚ್ಚೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಹಗ್ಗ ಕಿರಿಯ ವಿಭಾಗದಲ್ಲಿ ಪದವು ಕಾನಡ್ಕ ಫ್ಲಾವಿ ಡಿಸೋಜಾ ಅವರ ಕೋಣಗಳು ಪ್ರಥಮ, ಯೆರ್ಮಾಳ್ ರೋಹಿತ್ ಹೆಗ್ಡೆ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ನೇಗಿಲು ಹಿರಿಯ ವಿಭಾಗದಲ್ಲಿ 80 ಬಡಗಬೆಟ್ಟು ಕಲ್ಲಪಾಪು ಸಂದೀಪ್ ಶೆಟ್ಟಿ ಅವರ ಕೋಣಗಳು ಪ್ರಥಮ, ಕಕ್ಕೆಪದವು ಪೆರಂಗಾಳು ಬಾಬು ತನಿಯಪ್ಪ ಗೌಡ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಇದನ್ನೂ ಓದಿ: ಮೈಸೂರು ಕಂಬಳದಲ್ಲಿ ದಾಖಲೆ ಬರೆದ ಕಕ್ಕುಂಜೆ ಕೋಣಗಳು: 8.85 ಸೆಕೆಂಡ್ನಲ್ಲಿ 100 ಮೀಟರ್ ಓಟ!
ನೇಗಿಲು ಕಿರಿಯ ವಿಭಾಗದಲ್ಲಿ ಉಡುಪಿ ಕಕ್ಕುಂಜೆಯ ಸಂತೋಷ್ ಶಿವರಾಜ್ ಪೂಜಾರಿ ಅವರ ಕೋಣಗಳು ದಾಖಲೆಯ ಓಟದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ಮುನಿಯಾಲು ಉದಯ ಕುಮಾರ್ ಶೆಟ್ಟಿ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ಅಡ್ಡ ಹಲಗೆ ವಿಭಾಗದಲ್ಲಿ ಇರುವೈಲ್ ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ ಅವರ ಕೋಣಗಳು ಪ್ರಥಮ, ವಿಟ್ಲ ಕುಂಡಡ್ಕ ಜಯಂತ ದಾಸ್ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

