ಭಾರತೀಯ ಮಾರುಕಟ್ಟೆಗೆ ಮರಳಿದ ಜನಪ್ರಿಯ ಎಸ್‌ಯುವಿ

ಬೆಂಗಳೂರು: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ್ದ ಜನಪ್ರಿಯ ಎಸ್‌ಯುವಿ ‘ರೆನಾಲ್ಟ್ ಡಸ್ಟರ್’ (Renault Duster) ಈಗ ಸಂಪೂರ್ಣ ನೂತನ ಅವತಾರದಲ್ಲಿ ಮರಳಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಅತ್ಯಂತ ನಿರೀಕ್ಷಿತ ‘ರೆನಾಲ್ಟ್ ಡಸ್ಟರ್ ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್ 160’ (Renault Duster Strong Hybrid E-Tech 160) ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಂಪನಿಯು ಜಾಗತಿಕವಾಗಿ ಹೆಸರುವಾಸಿಯಾಗಿರುವ ಸ್ಟ್ರಾಂಗ್-ಹೈಬ್ರಿಡ್ ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿದೆ.

ವೇರಿಯೆಂಟ್‌ವಾರು ಎಕ್ಸ್-ಶೋರೂಮ್ ಬೆಲೆ ವಿವರ:

ಮೂರು ಆಕರ್ಷಕ ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಈ ಹೊಸ ಎಸ್‌ಯುವಿಯ ಆರಂಭಿಕ ಬೆಲೆಯು ₹16.99 ಲಕ್ಷದಿಂದ ಆರಂಭವಾಗಿ, ಟಾಪ್-ಎಂಡ್ ಮಾಡೆಲ್‌ಗೆ ₹19.49 ಲಕ್ಷದವರೆಗೆ (ಎಕ್ಸ್-ಶೋರೂಮ್) ಇದೆ.

  • Evolution Strong Hybrid E-Tech 160: ₹16.99 ಲಕ್ಷ

  • Techno Strong Hybrid E-Tech 160: ₹18.99 ಲಕ್ಷ

  • Emotion Strong Hybrid E-Tech 160: ₹19.49 ಲಕ್ಷ

ಎಂಜಿನ್ ಹಾಗೂ ಅತ್ಯಾಧುನಿಕ ಹೈಬ್ರಿಡ್ ತಂತ್ರಜ್ಞಾನ:

  • ಪವರ್‌ಫುಲ್ ಔಟ್‌ಪುಟ್: ಈ ಹೊಸ ಡಸ್ಟರ್ ಹೈಬ್ರಿಡ್ 1.8-ಲೀಟರ್ ಪೆಟ್ರೋಲ್ ಎಂಜಿನ್, ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಹಾಗೂ 1.4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದು, ಒಟ್ಟಾರೆಯಾಗಿ 16.99 ಪಿಎಸ್ (160 PS) ಶಕ್ತಿಯನ್ನು ಉತ್ಪಾದಿಸುತ್ತದೆ.

  • ಚಾರ್ಜಿಂಗ್ ಗೊಂದಲವಿಲ್ಲ: ಇದೊಂದು ಪ್ಲಗ್-ಇನ್ ಹೈಬ್ರಿಡ್ ಅಲ್ಲದಿರುವುದರಿಂದ ಹೊರಗಿನಿಂದ ಚಾರ್ಜ್ ಮಾಡುವ ಅವಶ್ಯಕತೆಯಿಲ್ಲ. ವಾಹನ ಚಾಲನೆ ಮಾಡುವಾಗ ಬ್ರೇಕಿಂಗ್ ರೀಜೆನೆರೇಷನ್ ಮತ್ತು ಎನರ್ಜಿ ರಿಕವರಿ ಮೂಲಕ ಬ್ಯಾಟರಿಯು ತಾನಾಗಿಯೇ ಚಾರ್ಜ್ ಆಗುತ್ತದೆ.

  • ಎಫ್‌1 ಪ್ರೇರಿತ ಗೇರ್‌ಬಾಕ್ಸ್: ಫಾರ್ಮುಲಾ 1 ರೇಸಿಂಗ್ ತಂತ್ರಜ್ಞಾನದಿಂದ ಪ್ರೇರಿತವಾದ ಮಲ್ಟಿ-ಮೋಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇದರ ಮತ್ತೊಂದು ವಿಶೇಷತೆಯಾಗಿದೆ. ಇದರಲ್ಲಿ 2 ಎಲೆಕ್ಟ್ರಿಕ್ ಗೇರ್‌ಗಳು ಮತ್ತು 4 ಪೆಟ್ರೋಲ್ ಗೇರ್‌ಗಳ ಸಂಯೋಜನೆಯಿದ್ದು, ವಿಭಿನ್ನ ಡ್ರೈವಿಂಗ್ ಪರಿಸ್ಥಿತಿಗಳಿಗೆ ಅನುಗುಣವಾಗಿ ಒಟ್ಟು 15 ಡ್ರೈವ್ ಕಾಂಬಿನೇಷನ್‌ಗಳನ್ನು ನೀಡುತ್ತದೆ.

ಮೈಲೇಜ್ ಹಾಗೂ ಪರ್ಫಾಮೆನ್ಸ್:

  • ಅದ್ಭುತ ಮೈಲೇಜ್: ARAI ಪ್ರಮಾಣೀಕರಣದ ಪ್ರಕಾರ ಈ ಕಾರು ಲೀಟರ್‌ಗೆ 29 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ದೃಢಪಡಿಸಿದೆ. ನಗರ ಪ್ರದೇಶದಲ್ಲಿ ಸೂಕ್ತ ಪರಿಸ್ಥಿತಿಯಲ್ಲಿ ಶೇ. 80ರಷ್ಟು ಸಂಚಾರವನ್ನು ಕೇವಲ ಎಲೆಕ್ಟ್ರಿಕ್ ಮೋಡ್‌ (EV Mode)ನಲ್ಲೇ ನಡೆಸಬಹುದು. ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಶೇ. 29ರಷ್ಟು ಇಂಧನ ಉಳಿತಾಯವನ್ನು ಇದು ಒದಗಿಸಲಿದೆ.

ಇದನ್ನೂ ಓದಿ: ಆಟೋಮೊಬೈಲ್ ಮಾರುಕಟ್ಟೆಗೆ ಟಾಟಾ ಪಂಚ್‌ HBX ಹೊಸ ಎಂಟ್ರಿ

ಆಕರ್ಷಕ  ಫೀಚರ್ಸ್:

ಹೊಸ ಡಸ್ಟರ್ ತನ್ನ ಒರಟಾದ (Rugged) ಎಸ್‌ಯುವಿ ಲುಕ್ ಅನ್ನು ಉಳಿಸಿಕೊಂಡಿದ್ದು, ಇದರೊಂದಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಪಡೆದುಕೊಂಡಿದೆ:

  • 212 ಎಂಎಂ (212 mm) ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್

  • ಪನೋರಮಿಕ್ ಸನ್‌ರೂಫ್ ಹಾಗೂ ಪವರ್ಡ್ ಟೈಲ್‌ಗೇಟ್

  • ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಹಾಗೂ ಡ್ಯುಯಲ್-ಜೋನ್ ಕ್ಲೈಮೆಂಟ್ ಕಂಟ್ರೋಲ್

  • 10.1 ಇಂಚಿನ ಓಪನ್‌ಆರ್ ಲಿಂಕ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • ಟಾಪ್-ಎಂಡ್ ಎಮೋಷನ್ ವೇರಿಯೆಂಟ್‌ನಲ್ಲಿ ‘ಡ್ಯೂನ್ ಬ್ರೌನ್’ ಲೆಥೆರೆಟ್ ಫಿನಿಶ್ ಅಪ್ಹೋಲ್ಸ್ಟರಿ.

ಮಾರುಕಟ್ಟೆಯಲ್ಲಿ ರೂ. 17 ಲಕ್ಷದಿಂದ ರೂ. 20 ಲಕ್ಷದೊಳಗೆ ಡೀಸೆಲ್ ಎಸ್‌ಯುವಿಗಳನ್ನು ಎದುರು ನೋಡುವ ಗ್ರಾಹಕರಿಗೆ ಈ ನೂತನ ರೆನಾಲ್ಟ್ ಡಸ್ಟರ್ ಹೈಬ್ರಿಡ್ ಅತ್ಯುತ್ತಮ ಹಾಗೂ ಪರಿಸರ ಸ್ನೇಹಿ ಆಯ್ಕೆಯಾಗಲಿದೆ ಎಂದು ರೆನಾಲ್ಟ್ ವಿಶ್ವಾಸ ವ್ಯಕ್ತಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ