Breaking News

ಭಾರತೀಯ ಮಾರುಕಟ್ಟೆಗೆ ಸ್ಕೋಡಾ ಕೈಲಾಕ್ ಸ್ಪೋರ್ಟ್‌ಲೈನ್ ಎಂಟ್ರಿ: ಬೆಲೆ ಎಷ್ಟು? ಏನೆಲ್ಲಾ ವೈಶಿಷ್ಟ್ಯಗಳಿವೆ?

ದೆಹಲಿ: ಸ್ಕೋಡಾ ಸಂಸ್ಥೆಯು ಭಾರತದಲ್ಲಿ ತನ್ನ ಬಹುನಿರೀಕ್ಷಿತ ‘ಕೈಲಾಕ್ ಸ್ಪೋರ್ಟ್‌ಲೈನ್’ (Kylaq Sportline) ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆಯು ಶೋರೂಮ್ ದರದಂತೆ (Ex-showroom) ₹11.32 ಲಕ್ಷದಿಂದ ₹12.32 ಲಕ್ಷದವರೆಗೂ ಇದೆ.

ಈ ಸ್ಪೋರ್ಟ್‌ಲೈನ್ ಆವೃತ್ತಿಯನ್ನು ಮಧ್ಯಮ ಶ್ರೇಣಿಯ ‘ಸಿಗ್ನೇಚರ್+’ ಮತ್ತು ಟಾಪ್ ಶ್ರೇಣಿಯ ‘ಪ್ರೆಸ್ಟೀಜ್’ ವೆರಿಯೆಂಟ್ ನಡುವೆ ಪರಿಚಯಿಸಲಾಗಿದ್ದು, ಕಾರಿಗೆ ಸ್ಪೋರ್ಟಿ ಲುಕ್ ನೀಡಲು ಒಳಾಂಗಣ ಹಾಗೂ ಹೊರಾಂಗಣದಲ್ಲಿ ಬ್ಲ್ಯಾಕ್-ಔಟ್ (Blacked-out) ವಿನ್ಯಾಸವನ್ನು ನೀಡಲಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುತ್ತಿದೆಯೇ ವಸಡಿನ ರಕ್ತಸ್ರಾವ, ಬಾಯಿ ದುರ್ವಾಸನೆ?: ಕಾರಣ ನಿಮ್ಮ ಈ ಹವ್ಯಾಸಗಳೇ ಇರಬಹುದು

ಎಂಜಿನ್ ಮತ್ತು ಕಾರ್ಯಕ್ಷಮತೆ 

ಎಂಜಿನ್: 1.0-ಲೀಟರ್ ಡೈರೆಕ್ಟ್-ಇಂಜೆಕ್ಷನ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್: 115hp ಪವರ್ ಹಾಗೂ 178Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ

ಗೇರ್‌ಬಾಕ್ಸ್: 6-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯ.

ಗ್ರಾಹಕರಿಗೆ ಡಾರ್ಕ್-ಕ್ರೋಮ್ ಗ್ರಿಲ್ ಮತ್ತು ಗ್ಲಾಸ್-ಬ್ಲ್ಯಾಕ್ ಸೈಡ್ ಮೋಲ್ಡಿಂಗ್ ಒಳಗೊಂಡ ‘ಸ್ಪೋರ್ಟ್‌ಲೈನ್ ಆಕ್ಸೆಸರಿ ಪ್ಯಾಕ್’ ಆಯ್ಕೆಯೂ ಸಿಗಲಿದೆ.

ಕುಶಾಕ್ ಮತ್ತು ಸ್ಲಾವಿಯಾ ಸ್ಪೋರ್ಟ್‌ಲೈನ್ ಮಾದರಿಯಲ್ಲೇ ಕೈಲಾಕ್ ಕೂಡ ಕಪ್ಪು ಬಣ್ಣದ 17-ಇಂಚಿನ ಅಲಾಯ್ ವೀಲ್ಸ್‌, ಕಪ್ಪು ORVMಗಳು, ಬ್ಲ್ಯಾಕ್ ರೂಫ್ ಮತ್ತು ಬಂಪರ್ ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿದೆ. ಇದರ ಜೊತೆಗೆ C-ಪಿಲ್ಲರ್ ಮತ್ತು ಟೇಲ್‌ಗೇಟ್‌ ಮೇಲೆ ‘Sportline’ ಬ್ಯಾಡ್ಜಿಂಗ್ ನೀಡಲಾಗಿದೆ.

ಪ್ರೊಜೆಕ್ಟರ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಕಾರ್ನರಿಂಗ್ ಫಂಕ್ಷನ್ ಹೊಂದಿರುವ ಎಲ್‌ಇಡಿ ಫಾಗ್‌ಲ್ಯಾಂಪ್‌ಗಳನ್ನು ಹೊಂದಿರುವ ಅತ್ಯಂತ ಕೈಗೆಟುಕುವ ವೆರಿಯೆಂಟ್ ಇದಾಗಿದೆ.ಕಾರಿನ ಒಳಗಡೆ ಆಲ್-ಬ್ಲ್ಯಾಕ್ ಥೀಮ್ ನೀಡಲಾಗಿದ್ದು, ಹೆಡ್‌ರೆಸ್ಟ್‌ ಮೇಲೆಯೂ ‘Sportline’ ಬ್ರ್ಯಾಂಡಿಂಗ್ ಇದೆ. ಅಲ್ಯೂಮಿನಿಯಂ ಪೆಡಲ್ಸ್‌ ಹಾಗೂ ವೈಟ್ ಆಂಬಿಯೆಂಟ್ ಲೈಟಿಂಗ್ ಕಾರಿನ ಗತ್ತನ್ನು ಹೆಚ್ಚಿಸಿವೆ.

ಸಿಂಗಲ್-ಪೇನ್ ಸನ್‌ರೂಫ್, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಆಡಿಯೋ, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *