ಟೆಕ್ಸಾಸ್: ಮೂರು ದೊಡ್ಡ ಗಾಲ್ಫ್ ಬಾಲ್‌ಗಳನ್ನು (Golf Balls) ಆಹಾರವೆಂದು ಭಾವಿಸಿ ನುಂಗಿ ಪ್ರಾಣಾಪಾಯದಲ್ಲಿದ್ದ ಅಪರೂಪದ ಹಾವೊಂದಕ್ಕೆ ವಿದೇಶಿ ಪಶುವೈದ್ಯರು ಶಸ್ತ್ರಚಿಕಿತ್ಸೆಯಿಲ್ಲದೆ (Surgery) ಶರೀರದಿಂದ ಬಾಲ್‌ಗಳನ್ನು ಹೊರತೆಗೆದು ಪುನರ್ಜನ್ಮ ನೀಡಿದ್ದಾರೆ. ದಕ್ಷಿಣ ಟೆಕ್ಸಾಸ್‌ನ ‘ಸೌತ್ ಟೆಕ್ಸಾಸ್ ಏವಿಯನ್ ಮತ್ತು ಎಕ್ಸೋಟಿಕ್ ಹಾಸ್ಪಿಟಲ್’ ವೈದ್ಯರು ಈ ಸಂಕೀರ್ಣ ಹಾಗೂ ವಿಶಿಷ್ಟ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮೂಲಗಳ ಪ್ರಕಾರ, ಈ ಅಪರೂಪದ ಚಿಕಿತ್ಸೆಯ ಪ್ರಮುಖ ವಿವರಗಳು ಹೀಗಿವೆ:
ಹಾವಿನ ಹೊಟ್ಟೆಯಲ್ಲಿದ್ದ ಬಾಲ್‌ಗಳನ್ನು ತೆಗೆಯಲು ವೈದ್ಯರು ಹಾವಿಗೆ ತೀವ್ರ ಪ್ರಮಾಣದ ಅರಿವಳಿಕೆ (Heavy Sedation) ನೀಡಿ, ಅದು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುವಂತೆ ಮಾಡಿದರು. ಹಾವಿನ ಚರ್ಮ ಮತ್ತು ದೇಹದ ಭಾಗಗಳಿಗೆ ಯಾವುದೇ ಹಾನಿಯಾಗದಂತೆ, ಅತ್ಯಂತ ಜಾಗರೂಕತೆಯಿಂದ ತಮ್ಮ ಕೈಗಳಿಂದಲೇ ಹಾವಿನ ಹೊಟ್ಟೆಯನ್ನು ಮಸಾಜ್ ಮಾಡುತ್ತಾ ಗಾಲ್ಫ್ ಬಾಲ್ ಅನ್ನು ಮೆಲ್ಲನೆ ಬಾಯಿಯ ಕಡೆಗೆ ತಳ್ಳಿ ಹೊರತೆಗೆದಿದ್ದಾರೆ.
ಇದನ್ನೂ ಓದಿ: ನದಿಯ ಭೋರ್ಗರೆತದಲ್ಲಿ ಕೊಚ್ಚಿಹೋದ ಆನೆ ಮರಿ ರಕ್ಷಣೆ: ಪ್ರಾಣ ಪಣಕ್ಕಿಟ್ಟು ಜೀವ ಉಳಿಸಿದ ಮೀನುಗಾರರು
ಸೆಪ್ಟೆಂಬರ್ 22 ರಂದು ಆಸ್ಪತ್ರೆಯು ಈ ಚಿಕಿತ್ಸೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈದ್ಯರ ಈ ಕೌಶಲ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ವಿಲಕ್ಷಣ ಪ್ರಾಣಿಗಳ ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ಆಸ್ಪತ್ರೆಯ ಬಾಗಿಲ ಮೂಲಕ ಯಾವ ಪ್ರಾಣಿ ಯಾವ ಸಮಸ್ಯೆಯೊಂದಿಗೆ ‘ತೆವಳಿಕೊಂಡು’ (Slithering) ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಇದು ನಮ್ಮ ವೃತ್ತಿಜೀವನದ ನೆನಪಿನಲ್ಲಿ ಉಳಿಯುವ ಅಪರೂಪದ ಪ್ರಕರಣ” ಎಂದು ಆಸ್ಪತ್ರೆಯ ಪಶುವೈದ್ಯರು ಸಂತಸ ಹಂಚಿಕೊಂಡಿದ್ದಾರೆ.

