ಇಂದಿನ ದಿನ ಭವಿಷ್ಯ: ಶ್ರಾವಣ ಶುಕ್ರವಾರ ಮಹಾಲಕ್ಷ್ಮಿ ಅನುಗ್ರಹದಿಂದ ಈ ರಾಶಿಯವರಿಗೆ ತಡೆಯಿಲ್ಲದ ಧನಲಾಭ

ಜುಲೈ 31ರ ಶುಕ್ರವಾರ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಹಾಗೂ ಗ್ರಹಗಳ ಸಂಚಾರದ ಹಿನ್ನೆಲೆಯಲ್ಲಿ ದ್ವಾದಶ ರಾಶಿಗಳ (12 ರಾಶಿಗಳ) ದಿನ ಭವಿಷ್ಯ ಮತ್ತು ಫಲಫಲಗಳ ಸಮಗ್ರ ಮಾಹಿತಿ ಇಲ್ಲಿದೆ.

ಮೇಷ ರಾಶಿ

ಇಂದು ಮೇಷ ರಾಶಿಯವರಿಗೆ ಅತ್ಯಂತ ಶುಭಕರ ಹಾಗೂ ಸಕಾರಾತ್ಮಕ ದಿನ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಉದ್ಯೋಗದಲ್ಲಿ ಪ್ರಗತಿ ಮತ್ತು ನೆಮ್ಮದಿ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದ್ದು, ಕುಟುಂಬದವರ ಬೆಂಬಲ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಯೋಚಿಸಿ ನಿರ್ಧಾರ ತಗೆದುಕೊಳ್ಳಿ.

ವೃಷಭ ರಾಶಿ

ನಿಮಗೆ ಇಂದು ಪ್ರಗತಿ ಹಾಗೂ ಯಶಸ್ಸಿನ ದಿನ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಸೂಕ್ತ ಸಮಯ. ವ್ಯಾಪಾರ ಅಥವಾ ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಅಪರಿಚಿತರನ್ನು ಅತಿಯಾಗಿ ನಂಬಬೇಡಿ.

ಮಿಥುನ ರಾಶಿ

ಕೆಲಸದ ಒತ್ತಡ ಹಾಗೂ ಓಡಾಟ ಹೆಚ್ಚಾಗಲಿದ್ದು, ಖರ್ಚುಗಳೂ ಏರಿಕೆಯಾಗಬಹುದು. ಆದರೆ, ಕಚೇರಿಯಲ್ಲಿ ಬಯಸಿದ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಹಳೆಯ ಸಾಲಗಳನ್ನು ತೀರಿಸಲು ಅವಕಾಶ ಸಿಗಲಿದೆ. ಪ್ರೇಮ ಜೀವನದಲ್ಲಿ ಸಂತೋಷದ ಕ್ಷಣಗಳು ಇರಲಿವೆ.

ಕಟಕ ರಾಶಿ

ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗುವ ದಿನ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಅಥವಾ ಇಷ್ಟದ ಕೆಲಸ ಸಿಗಲಿದೆ. ಆತುರದ ನಿರ್ಧಾರಗಳು ಹಾಗೂ ವ್ಯವಹಾರದಲ್ಲಿ ಅಜಾಗರೂಕತೆ ಬೇಡ. ಮಾತಿನ ಮೇಲೆ ನಿಗ್ರಹವಿರಲಿ, ತಂದೆಯವರ ಆರೋಗ್ಯ ಮತ್ತು ಅಭಿಪ್ರಾಯಕ್ಕೆ ಗೌರವ ನೀಡಿ.

ಸಿಂಹ ರಾಶಿ

ಬುದ್ಧಿವಂತಿಕೆ ಹಾಗೂ ವಿವೇಚನೆಯಿಂದ ಕೈಗೊಳ್ಳುವ ನಿರ್ಧಾರಗಳು ಲಾಭ ತರಲಿವೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಇತರರ ವಿಚಾರಗಳಲ್ಲಿ ಅನಗತ್ಯವಾಗಿ ತಲೆಹಾಕಬೇಡಿ. ಆರೋಗ್ಯದಲ್ಲಿ ಸಣ್ಣಪುಟ್ಟ ಏರಿಳಿತಗಳು ಕಂಡುಬರಬಹುದು, ಜಾಗ್ರತೆ ವಹಿಸಿ.

ಕನ್ಯಾ ರಾಶಿ

ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದ್ದು, ಮನಸ್ಸಿಗೆ ಶಾಂತಿ ದೊರೆಯಲಿದೆ. ಹೊಸ ವಿಷಯಗಳನ್ನು ಕಲಿಯಲು ಉತ್ತಮ ಸಮಯ. ಅನಗತ್ಯ ಖರ್ಚುಗಳನ್ನು ನಿಯಂತ್ರಣದಲ್ಲಿಡಿ. ಕಚೇರಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಗೌರವ ಹಾಗೂ ಸಮ್ಮಾನ ದೊರೆಯಲಿದೆ.

ತುಲಾ ರಾಶಿ

ಉದ್ಯೋಗ ಅಥವಾ ರಾಜಕೀಯ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಮತ್ತು ಉನ್ನತ ಸ್ಥಾನ ಸಿಗುವ ಸಾಧ್ಯತೆ ಇದೆ. ಬಾಕಿ ಇರುವ ಆರ್ಥಿಕ ವಹಿವಾಟುಗಳು ಬಗೆಹರಿಯಲಿವೆ. ಶತ್ರುಗಳ ಕುತಂತ್ರಕ್ಕೆ ಕಿವಿಗೊಡಬೇಡಿ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನದಿಂದ ಸಂತಸ ವೃದ್ಧಿಸಲಿದೆ.

ವೃಶ್ಚಿಕ ರಾಶಿ

ಪ್ರಯಾಣಿಸುವಾಗ ಹಾಗೂ ವಾಹನ ಚಾಲನೆ ಮಾಡುವಾಗ ವಿಶೇಷ ಎಚ್ಚರಿಕೆ ಅಗತ್ಯ. ವ್ಯವಹಾರದಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡುವ ಮುನ್ನ ನುರಿತರ ಸಲಹೆ ಪಡೆಯಿರಿ. ಕೆಲಸ ವಿಳಂಬವಾಗುವುದರಿಂದ ಸ್ವಲ್ಪ ನಿರಾಶೆಯಾಗಬಹುದು, ತಾಳ್ಮೆಯಿಂದಿರಿ.

ಧನು ರಾಶಿ

ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ಸಂತೋಷ ಮತ್ತು ತೃಪ್ತಿಕರ ದಿನ ನಿಮ್ಮದಾಗಲಿದೆ. ಅತ್ತೆ-ಮಾವನ ಕಡೆಯಿಂದ ಆರ್ಥಿಕ ಲಾಭ ಅಥವಾ ಬೆಂಬಲ ಸಿಗಲಿದೆ. ಬಾಕಿ ಉಳಿದಿದ್ದ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳಲಿವೆ. ಮೇಲಧಿಕಾರಿಗಳ ಜೊತೆ ತಾಳ್ಮೆಯಿಂದ ವರ್ತಿಸಿ.

ಮಕರ ರಾಶಿ

ಉದ್ಯೋಗ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೇರುವ ಅವಕಾಶಗಳಿವೆ. ಕುಟುಂಬದ ಸದಸ್ಯರ ಬೆಂಬಲದಿಂದ ಪ್ರಮುಖ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ವಹಿಸುವುದು ಒಳಿತು.

ಕುಂಭ ರಾಶಿ

ಮಾನಸಿಕ ನೆಮ್ಮದಿ ಸಿಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ದಿನ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಮುದ ಸಿಗಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ.

ಮೀನ ರಾಶಿ

ಆದಾಯದ ಮೂಲಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಶುಭ ಫಲಿತಾಂಶ ಸಿಗಲಿದೆ. ಕುಟುಂಬದಲ್ಲಿ ಧಾರ್ಮಿಕ ಮಂಗಳ ಕಾರ್ಯಗಳು ನೆರವೇರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *