ಮೇಷ (Aries): ಅದೃಷ್ಟ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಪ್ರೇಮ ಜೀವನದಲ್ಲಿ ಸಂತಸದ ವಾತಾವರಣ ಇರಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ.
ವೃಷಭ (Taurus): ಯಾವುದೇ ಕೆಲಸದಲ್ಲೂ ಆತುರ ಪಡಬೇಡಿ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿ. ಕುಟುಂಬದಲ್ಲಿ ಮಕ್ಕಳಿಂದ ಸಂತೋಷ ಸಿಗಲಿದೆ.
ಮಿಥುನ (Gemini): ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತಸ ತರಲಿದೆ.
ಕರ್ಕಾಟಕ (Cancer): ಶತ್ರುಗಳ ಮೇಲೆ ಮೇಲುಗೈ ಸಾಧಿಸುವಿರಿ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿ ಸಿಗಲಿದೆ. ಆತುರದ ನಿರ್ಧಾರಗಳನ್ನು ತಪ್ಪಿಸಿ.
ಸಿಂಹ (Leo): ಉದ್ಯೋಗ ಹುಡುಕಾಟ ಪೂರ್ಣಗೊಳ್ಳಬಹುದು. ಹೂಡಿಕೆ ಮಾಡುವಾಗ ಎಚ್ಚರವಿರಲಿ. ತಂದೆಯಿಂದ ಪ್ರಮುಖ ಜವಾಬ್ದಾರಿ ಸಿಗಲಿದೆ.
ಕನ್ಯಾ (Virgo): ಸಣ್ಣಪುಟ್ಟ ಸವಾಲುಗಳು ಬಂದರೂ ತಾಳ್ಮೆಯಿಂದ ಎದುರಿಸಿ. ಕೆಲಸದಲ್ಲಿ ಬಡ್ತಿ ವಿಳಂಬವಾಗಬಹುದು. ಕುಟುಂಬದಲ್ಲಿ ಶುಭ ಕಾರ್ಯದ ಅಡಚಣೆ ನಿವಾರಣೆಯಾಗಲಿದೆ.
ತುಲಾ (Libra): ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ಸವಾಲುಗಳನ್ನು ಜಾಣ್ಮೆಯಿಂದ ಎದುರಿಸಿ. ಸಂಗಾತಿಯ ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ.
ವೃಶ್ಚಿಕ (Scorpio): ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಕುಟುಂಬದಲ್ಲಿ ಸಂತಸ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಪ್ರಗತಿ ಸಾಧಿಸುವಿರಿ.
ಧನುಸ್ಸು (Sagittarius): ಸೋಮಾರಿತನ ಬಿಟ್ಟು ಮುನ್ನಡೆಯಿರಿ. ತಂದೆಯ ಬೆಂಬಲದಿಂದ ದೊಡ್ಡ ಪ್ರಯೋಜನ ಸಿಗಲಿದೆ. ಗೌರವ ಹಾಗೂ ಆದಾಯ ಹೆಚ್ಚಾಗಲಿದೆ.
ಮಕರ (Capricorn): ವೃತ್ತಿ ಕ್ಷೇತ್ರದಲ್ಲಿ ತಾಳ್ಮೆಯಿಂದ ಕೆಲಸ ಮಾಡಿ. ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಆರೋಗ್ಯದ ಕಡೆ ಗಮನವಿರಲಿ.
ಕುಂಭ (Aquarius): ಸಕಾರಾತ್ಮಕ ಚಿಂತನೆಗಳು ನಿಮ್ಮನ್ನು ಬೆಳೆಸಲಿವೆ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ.
ಮೀನ (Pisces): ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕುಟುಂಬದವರ ಬೆಂಬಲ ಸಿಗಲಿದ್ದು, ಆರ್ಥಿಕ ಸ್ಥಿತಿ ಗಟ್ಟಿಯಾಗಲಿದೆ.

