ಹಾವನ್ನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ತೀವ್ರ ನಿರ್ಲಕ್ಷ್ಯವಹಿಸಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಹಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಿಸುವ ಬದಲು, ವ್ಯಕ್ತಿ ಅದನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸಿ ಆಟವಾಡಲು ಮುಂದಾಗಿದ್ದಾರೆ. ಇನ್ನೂ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ವಿಡಿಯೋ ಪ್ರಕಾರ ಇದು ಉತ್ತರ ಭಾರತದಲ್ಲಿ ನಡೆದಿರಬಹುದು ಎಂದು ಹೇಳಲಾಗಿದೆ.
ದುರದೃಷ್ಟವಶಾತ್, ಈ ಪ್ರದರ್ಶನದ ನಡುವೆ ಹಾವು ವ್ಯಕ್ತಿಗೆ ಕಚ್ಚಿದೆ. ಹಾವಿನ ವಿಷವು ಅತ್ಯಂತ ವೇಗವಾಗಿ ದೇಹಕ್ಕೆ ಹರಡಿದ್ದರಿಂದ, ಲೈವ್ ವಿಡಿಯೋ ಮಾಡುತ್ತಿರುವಾಗಲೇ ವ್ಯಕ್ತಿ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ: Viral: ಅಂಗಡಿಗೆ ನುಗ್ಗಿ ಚಿನ್ನ ಕದ್ದು ಹಾರಿಹೋದ ಕಾಗೆ! ಮುಂದೆನಾಯ್ತು?- Video
ವಿಡಿಯೋ ಇಲ್ಲಿದೆ ನೋಡಿ

The man who came to catch the snake paid a heavy price for playing with it, a painful de**ath in a live video within 3 minutes! pic.twitter.com/usGR3Xx3MI
— Ghar Ke Kalesh (@gharkekalesh) May 1, 2026
;
ಈ ವೇಳೆ ಕೇವಲ 3 ನಿಮಿಷಗಳ ಅಂತರದಲ್ಲೇ ವ್ಯಕ್ತಿಯ ಪ್ರಾಣ ಹಾರಿಹೋಗಿರುವುದು ಎಲ್ಲರನ್ನೂ ಆತಂಕಕ್ಕೆ ತಳ್ಳಿದೆ. ವನ್ಯಜೀವಿಗಳೊಂದಿಗೆ ಅನಾವಶ್ಯಕ ಸಾಹಸ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

