ಹೈದರಾಬಾದ್: ನಾಲ್ಕು ವರ್ಷಗಳ ಹಿಂದೆ ಪ್ರೇಮಿಗಳ ಜೋಡಿಯೊಂದಕ್ಕೆ ಮದುವೆಯಾಗಲು ನೆರವು ನೀಡಿದ್ದ ಯುವಕನೊಬ್ಬನನ್ನು ಕಿಡಿಗೇಡಿಗಳು ಗಣೇಶ ಮಂಟಪದಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ. ಹೈದರಾಬಾದ್ನ ಲಾಳಗುಡ ಪೊಲೀಸ್ ಠಾಣಾ (Lalaguda Police Station) ವ್ಯಾಪ್ತಿಯಲ್ಲಿ ಈ ರಕ್ತಸಿಕ್ತ ಹಾಗೂ ದುರಂತ ಘಟನೆ ವರದಿಯಾಗಿದೆ.
ಹತ್ಯೆಗೀಡಾದ ಯುವಕನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಯುವತಿಯೊಬ್ಬಳು ತನ್ನ ಪ್ರೇಮಿಯೊಂದಿಗೆ ಓಡಿಹೋಗಿ ಮದುವೆಯಾಗಲು ಕಾರ್ತಿಕ್ ನೆರವಾಗಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಯುವತಿಯ ಕಡೆಯ ಸಂಬಂಧಿಕರು ಹಾಗೂ ಪುಂಡರು ಕಾರ್ತಿಕ್ ಮೇಲೆ ತೀವ್ರ ದ್ವೇಷವನ್ನು ಇಟ್ಟುಕೊಂಡಿದ್ದರು.
ప్రేమజంటకు సహాయం చేశాడని వినాయకుడి మండపం వద్ద యువకుడి దారుణ హత్య
హైదరాబాద్ – లాలాగూడ పోలీస్ స్టేషన్ పరిధిలో దారుణం
నాలుగేళ్ల క్రితం ఓ ప్రేమ జంటకు సహాయం చేశాడని, యువతి ప్రియుడితో వెళ్ళిపోయిందని కోపంతో కార్తిక్ అనే యువకుడిని హత్య చేసిన దుండగులు
వినాయకుడి మండపంలో ఉండగా కత్తులతో… pic.twitter.com/JDvNa4qAe3
— Telugu Scribe (@TeluguScribe) September 14, 2026
ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಕಾರ್ತಿಕ್ ವಿನಾಯಕ ಮಂಟಪದಲ್ಲಿದ್ದಾಗ, ಸಮಯ ಸಾಧಿಸಿ ಬಂದ ರೌಡಿಗಳ ಗುಂಪು ಆತನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದೆ. ಸಾರ್ವಜನಿಕರ ಕಣ್ಣೆದುರಲ್ಲೇ ಕಾರ್ತಿಕ್ನನ್ನು ಭೀಕರವಾಗಿ ನೆರೆದು ಕೊಲೆ ಮಾಡಲಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಕಾರ್ತಿಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ಕುತ್ತಿಗೆಯಲ್ಲಿ ಟ್ರಾಕ್ಟರ್ ಟೈರ್ ಸಿಲುಕಿಕೊಂಡು ಪರದಾಡುತ್ತಿರುವ ಒಂಟಿ ಆನೆ
ಘಟನೆ ನಡೆದ ತಕ್ಷಣ ಲಾಳಗುಡ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹತ್ಯೆ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

