Breaking News

ರಾಜಸ್ಥಾನದ ಅಬು ರಸ್ತೆಯಲ್ಲಿ ಆಘಾತಕಾರಿ ಘಟನೆ: ಮನೆಯ ಮುಂಭಾಗ ನಿಂತಿದ್ದ 3 ವರ್ಷದ ಕಂದಮ್ಮನ ಮೇಲೆ ಬೀಡುಗಾಡಿನ ಹಸು ದಾಳಿ

ಅಬು ರಸ್ತೆ : ರಸ್ತೆಗಳಲ್ಲಿ ಅಲೆಯುವ ಜಾನುವಾರುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಸ್ಥಾನದ ಅಬು ರಸ್ತೆ (Abu Road) ಪ್ರದೇಶದಲ್ಲಿ ಮೂರು ವರ್ಷದ ಹಸುಗೂಸೊಂದರ ಮೇಲೆ ಬೀಡಾಡಿ ಹಸುವೊಂದು ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ದಾರುಣ ಘಟನೆ ವರದಿಯಾಗಿದೆ.ಮನೆಯ ಹೊರಭಾಗದಲ್ಲಿ ಆಟವಾಡುತ್ತಿದ್ದ ಕಂದಮ್ಮನ ಮೇಲೆ ಪ್ರಾಣಿಯೊಂದು ದಾಳಿ ನಡೆಸಿರುವುದು ಸ್ಥಳೀಯ ಪೋಷಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ಮೂಡಿಸಿದೆ.

ಮೂಲಗಳ ಪ್ರಕಾರ, 3 ವರ್ಷದ ಕಂದಮ್ಮ ತನ್ನ ಮನೆಯ ಅಂಗಳದ ಅಥವಾ ಮುಂಭಾಗದ ರಸ್ತೆಯ ಬಳಿ ಆಟವಾಡುತ್ತಿತ್ತು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಲೆಮಾರಿ ಹಸುವೊಂದು (Stray Cow) ಯಾವುದೇ ಮುನ್ಸೂಚನೆ ನೀಡದೆ ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಹಸುವಿನ ಹಠಾತ್ ದಾಡಿಯಿಂದ ಗಾಬರಿಗೊಂಡ ಮಗು ಕೆಳಗೆ ಬಿದ್ದಿದ್ದು, ಪ್ರಾಣಿ ತನ್ನ ಕಾಲು ಹಾಗೂ ಕೆಳಗಿನಿಂದ ಮಗುವನ್ನು ಗುದ್ದಿ ಗಾಯಗೊಳಿಸಿದೆ.

ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ 4 ಲಕ್ಷ ರೂ. ಲೂಟಿ: ಚಾಲಾಕಿ ಕಳ್ಳನನ್ನು 30 ನಿಮಿಷದಲ್ಲೇ ಬುಟ್ಟಿಗೆ ಹಾಕಿಕೊಂಡ ಪೊಲೀಸರು

ಇಲ್ಲಿದೆ ನೋಡಿ ವಿಡಿಯೋ


ಮಗುವಿನ ಅರಚಾಟ ಕೇಳಿ ತಕ್ಷಣವೇ ದಾವಿಸಿಬಂದ ಪೋಷಕರು ಹಾಗೂ ಸ್ಥಳೀಯರು ಹಸುವನ್ನು ಓಡಿಸಿ, ಗಾಯಗೊಂಡ ಕಂದಮ್ಮನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಗುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.ನಗರದ ವಸತಿ ಪ್ರದೇಶಗಳು ಹಾಗೂ ಪ್ರಮುಖ ಬೀದಿಗಳಲ್ಲಿ ಅಲೆಯುವ ಜಾನುವಾರುಗಳನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಆಡಳಿತ ಹಾಗೂ ಪುರಸಭೆ ವಿಫಲವಾಗಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ಮಕ್ಕಳನ್ನು ಹೊರಗೆ ಬಿಡಲೂ ಹೆಣಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಅಲೆಮಾರಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *