ನಾಗಪುರ: ಬ್ಯಾಂಕ್ ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿ ಬರೋಬ್ಬರಿ 4 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಮಹಾರಾಷ್ಟ್ರದ ನಾಗಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಕೇವಲ 30 ನಿಮಿಷಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಗಪುರದ ಸಕ್ಕರ್ ದರಾ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯಲ್ಲಿ ಈ ಭೀಕರ ದರೋಡೆ ಕೃತ್ಯ ನಡೆದಿದೆ.
ಶುಕ್ರವಾರದ ಸಾಮಾನ್ಯ ವಹಿವಾಟಿನ ವೇಳೆಯಲ್ಲಿ ಎಸ್‍ಬಿಐ ಬ್ಯಾಂಕ್ ಶಾಖೆಗೆ ಗ್ರಾಹಕನಂತೆ ಬಂದ ಆರೋಪಿಯು, ಕ್ಯಾಶ್ ಕೌಂಟರ್ ಬಳಿ ಇದ್ದ ಬ್ಯಾಂಕ್ ಉದ್ಯೋಗಿಗಳ ಮೇಲೆ ದಿಢೀರನೇ ಖಾರದ ಪುಡಿಯನ್ನು ಎರಚಿದ್ದಾನೆ.ಕಣ್ಣು ಉರಿಯಿಂದ ಸಿಬ್ಬಂದಿ ತತ್ತರಿಸುತ್ತಿದ್ದಂತೆಯೇ, ಕ್ಯಾಶ್ ಕೌಂಟರ್‌ನಲ್ಲಿ ಇರಿಸಲಾಗಿದ್ದ ₹4 ಲಕ್ಷ ನಗದನ್ನು ಎಗರಿಸಿ ಸ್ಥಳದಿಂದ ತಕ್ಷಣವೇ ಪರಾರಿಯಾಗಿದ್ದ.
नागपुर में एसबीआई बैंक से 4 लाख रुपये लूटे, आरोपी गिरफ्तार
महाराष्ट्र के नागपुर के सक्करदरा इलाके में एसबीआई बैंक की ब्रांच में एक शख्स ने कर्मचारियों की आंखों में मिर्ची पाउडर झोंककर कैश काउंटर से 4 लाख रुपये लूट लिए. वारदात के बाद आरोपी फरार हो गया, लेकिन पुलिस ने सीसीटीवी… pic.twitter.com/pmw7wnxADx
— zingabad (@zingabad) September 11, 2026
ಘಟನೆ ನಡೆದ ತಕ್ಷಣ ಎಚ್ಚೆತ್ತುಕೊಂಡ ಬ್ಯಾಂಕ್ ಆಡಳಿತ ಮಂಡಳಿಯು ಪೊಲೀಸರಿಗೆ ತುರ್ತು ಮಾಹಿತಿ ನೀಡಿದೆ. ಮಾಹಿತಿ ತಲುಪುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ನಾಗಪುರ ಪೊಲೀಸರು, ಬ್ಯಾಂಕ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿದ್ದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸಿದರು.
ಇದನ್ನೂ ಓದಿ: ನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ
ಆರೋಪಿಯ ಚಹರೆ ಹಾಗೂ ಆತ ಪರಾರಿಯಾದ ಮಾರ್ಗವನ್ನು ಪತ್ತೆಹಚ್ಚಿದ ಪೊಲೀಸರು, ನೆಟ್‌ವರ್ಕ್ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೇವಲ 30 ನಿಮಿಷಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯಿಂದ ಬ್ಯಾಂಕಿನಿಂದ ಲೂಟಿ ಮಾಡಲಾಗಿದ್ದ ಸಂಪೂರ್ಣ ₹4 ಲಕ್ಷ ಹಣವನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಈ ಮಿಂಚಿನ ಕಾರ್ಯಾಚರಣೆ ಹಾಗೂ ಕ್ಷಿಪ್ರ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

