ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಲಲಿತ್ ಮೋದಿ!: ‘ಐಪಿಎಲ್’ ಆರಂಭಿಸಿದ್ದಕ್ಕೆ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನಿಂದ ಕೊಲೆ ಬೆದರಿಕೆ; ಮಗನ ಕಿಡ್ನಾಪ್‌ಗೂ ನಡೆದಿತ್ತು ಸಂಚು!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಹಾಗೂ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ಜಾಗತಿಕ ಕ್ರಿಕೆಟ್ ಮತ್ತು ಭೂಗತ ಲೋಕದ (Underworld) ಕರಾಳ ನಂಟಿನ ಕುರಿತು ಅತ್ಯಂತ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ನ ಆರಂಭಿಕ ದಿನಗಳಲ್ಲಿ ತಮಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಆತನ ಡಿ-ಗ್ಯಾಂಗ್‌ನಿಂದ ನಿರಂತರವಾಗಿ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಲಲಿತ್ ಮೋದಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಲಲಿತ್ ಮೋದಿ ಅವರ ಪ್ರಕಾರ, ಭಾರತದಲ್ಲಿ ಐಪಿಎಲ್ ಟೂರ್ನಿ ಆರಂಭವಾದ ನಂತರ ದಾವೂದ್ ಇಬ್ರಾಹಿಂ ನಡೆಸುತ್ತಿದ್ದ ಶತಕೋಟಿ ಡಾಲರ್ ಮೌಲ್ಯದ ಕಾನೂನುಬಾಹಿರ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ (Match Fixing) ಸಾಮ್ರಾಜ್ಯಕ್ಕೆ ಭಾರಿ ಹೊಡೆತ ಬಿದ್ದಿತ್ತು. ಐಪಿಎಲ್‌ನ ಪಾರದರ್ಶಕತೆ ಮತ್ತು ಮ್ಯಾಚ್ ಫಿಕ್ಸಿಂಗ್ ವಿರುದ್ಧ ಲಲಿತ್ ಮೋದಿ ತಳೆದ ಕಠಿಣ ನಿಲುವು ಅಂಡರ್‌ವರ್ಲ್ಡ್ ದಂಧೆಗೆ ಕಂಟಕವಾಗಿ ಪರಿಣಮಿಸಿತ್ತು. ಇದರಿಂದ ಆಕ್ರೋಶಗೊಂಡಿದ್ದ ದಾವೂದ್ ಗ್ಯಾಂಗ್, ಮೋದಿ ಅವರನ್ನು ಮುಗಿಸಲು ಸಂಚು ರೂಪಿಸಿತ್ತು.

ಇದನ್ನೂ ಓದಿ: IPL: ಐಪಿಎಲ್ 2026 ಸೀಸನ್ ಪ್ರಶಸ್ತಿಗಳು, ವೈಭವ್‌ ಸೂರ್ಯವಂಶಿಗೆ ಸಿಂಹಪಾಲು

ಈ ಸಂಘರ್ಷ ಕೇವಲ ಬೆದರಿಕೆಗೆ ಮಾತ್ರ ಸೀಮಿತವಾಗಿರಲಿಲ್ಲ. ಲಲಿತ್ ಮೋದಿ ಅವರ ಮೇಲೆ ಹತ್ಯೆಯ ಯತ್ನಗಳು ನಡೆದಿದ್ದವು ಮತ್ತು ಅವರ ಮಗನನ್ನು ಅಪಹರಿಸಲು (Kidnap) ಭೂಗತ ಲೋಕದ ಗ್ಯಾಂಗ್ ಸ್ಕೆಚ್ ಹಾಕಿತ್ತು. ನಿರಂತರವಾಗಿ ಎದುರಾದ ಪ್ರಾಣಭಯ ಹಾಗೂ ಕುಟುಂಬದ ಸುರಕ್ಷತೆಯ ಕಾರಣದಿಂದಾಗಿಯೇ ತಾವು ಅಂತಿಮವಾಗಿ ಕ್ರಿಕೆಟ್ ಆಡಳಿತದಿಂದ ಮತ್ತು ಭಾರತದಿಂದ ದೂರ ಉಳಿಯಬೇಕಾಯಿತು ಎಂದು ಲಲಿತ್ ಮೋದಿ ಸುದೀರ್ಘ ವರ್ಷಗಳ ಬಳಿಕ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ವರದಿ ಇಡೀ ವಿಶ್ವ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು