ಬಿಗ್ ಬಾಸ್ ಮನೆಗೆ ಹೋಗಲು ಸಾಮಾನ್ಯ ಜನರಿಗೆ ಲಾಸ್ಟ್ ಚಾನ್ಸ್!: ಆಡಿಷನ್ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ಯಾವಾಗ?

ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಹಾಗೂ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಹೊಸ ಸೀಸನ್‌ನ ಆಡಿಷನ್‌ ಪ್ರಕ್ರಿಯೆ ಸದ್ಯ ಭರದಿಂದ ಸಾಗುತ್ತಿದೆ. ಈ ಬಾರಿ ಸಾಮಾನ್ಯ ಜನರಿಗೂ (Commoners) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಕಲರ್ಸ್ ಕನ್ನಡ ವಾಹಿನಿಯು ಸುವರ್ಣ ಅವಕಾಶ ನೀಡಿದ್ದು, ಆಡಿಷನ್ ವಿಡಿಯೋಗಳನ್ನು ಕಳುಹಿಸಲು ಜೂನ್ 21 ಅಂತಿಮ ದಿನಾಂಕ ಎಂದು ಅಧಿಕೃತವಾಗಿ ಪ್ರಕಟಿಸಿದೆ.

‘ನೀವೇ ಅಖಾಡಕ್ಕೆ ಇಳಿಯುವ ಸಮಯ ಬಂದಿದೆ!’:

“ಇಷ್ಟು ದಿನ ಟಿವಿ ಮುಂದೆ ಕುಳಿತು ಕೈತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು, ಈ ಬಾರಿ ನೀವೇ ನೇರವಾಗಿ ಅಖಾಡಕ್ಕೆ ಇಳಿಯುವ ಸಮಯ ಬಂದಿದೆ” ಎಂಬ ಪಂಚ್ ಲೈನ್‌ನೊಂದಿಗೆ ವಾಹಿನಿಯು ವೀಕ್ಷಕರಿಗೆ ಬಿಗ್ ಬಾಸ್ ಮನೆಗೆ ಮುಕ್ತ ಆಹ್ವಾನ ನೀಡಿದೆ. ನಿಮ್ಮಲ್ಲಿ ವಿಶಿಷ್ಟ ಪ್ರತಿಭೆ, ಅದ್ಭುತ ವ್ಯಕ್ತಿತ್ವ ಹಾಗೂ ಮನರಂಜನೆ ನೀಡುವ ಕ್ಷಮತೆ ಇದ್ದರೆ, ನೀವೂ ಕೂಡ ಈ ಬಾರಿಯ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಬಹುದು.

ಇದನ್ನೂ ಓದಿ: ದುಬೈನ ಶೇಖ್ ಯಾರಾದರೂ 10-15 ಕೋಟಿ ರೂ ನೀಡಿದ್ರೆ ಮಲಗೋಕೆ ರೆಡಿ ಎಂದ ಅಪೂರ್ವಾ ಮಖೀಜಾ

ವಿಡಿಯೋ ಅಪ್‌ಲೋಡ್ ಮಾಡುವುದು ಹೇಗೆ?:

ಬಿಗ್ ಬಾಸ್ ಮನೆಗೆ ಹೋಗುವ ಆಸೆ ಇರುವ ಸಾಮಾನ್ಯ ಜನರು ತಮಗಿರುವ ವಿಶಿಷ್ಟ ಗುಣಗಳು ಹಾಗೂ ಪ್ರತಿಭೆಯನ್ನು ಬಿಂಬಿಸುವ ಒಂದು ಅತ್ಯುತ್ತಮ ಆಡಿಷನ್ ವಿಡಿಯೋವನ್ನು ಮೊದಲು ಸಿದ್ಧಪಡಿಸಿಕೊಳ್ಳಬೇಕು. ನಂತರ ವಾಹಿನಿಯ ಅಧಿಕೃತ ವೆಬ್‌ಸೈಟ್ ಆದ colorskannada.jiostar.com ಗೆ ಭೇಟಿ ನೀಡಿ, ಅಲ್ಲಿ ಕೇಳಲಾದ ವಿವರಗಳೊಂದಿಗೆ ನಿಮ್ಮ ವಿಡಿಯೋವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಜೂನ್ 21 ರ ನಂತರ ಬರುವ ಯಾವುದೇ ವಿಡಿಯೋಗಳನ್ನು ಆಡಿಷನ್ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ ಎಂದು ವಾಹಿನಿ ತಿಳಿಸಿದೆ. ಹಾಗಾಗಿ, ಬಿಗ್ ಬಾಸ್ ಮನೆಗೆ ಹೋಗುವ ಕನಸು ಹೊತ್ತಿರುವವರಿಗೆ ಇದು ಕೊನೆಯ ಮತ್ತು ಅತ್ಯಮೂಲ್ಯ ಅವಕಾಶವಾಗಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು