ಪುತ್ತೂರಿನ ನೆಹರುನಗರದಲ್ಲಿ ಜೂನ್ 29ಕ್ಕೆ ಸರಸ್ವತಿ ಸೌಹಾರ್ದ ಸಹಕಾರಿಯ ನೂತನ 21ನೇ ಶಾಖೆ ಶುಭಾರಂಭ; ಡಾ. ಪ್ರಭಾಕರ ಭಟ್ ಕಲ್ಲಡ್ಕರಿಂದ ಉದ್ಘಾಟನೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಆರ್ಥಿಕ ಸಂಸ್ಥೆಗಳಲ್ಲಿ ಒಂದಾದ, ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಸಂಸ್ಥೆಯು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ರಾಜ್ಯಾದ್ಯಂತ ಯಶಸ್ವಿಯಾಗಿ 20 ಶಾಖೆಗಳೊಂದಿಗೆ ಮುನ್ನಡೆಯುತ್ತಿರುವ ಈ ಸಹಕಾರಿಯ ನೂತನ 21ನೇ ಶಾಖೆಯು ದಿನಾಂಕ 29-06-2026ರಂದು ಬೆಳಿಗ್ಗೆ ಪುತ್ತೂರಿನ ನೆಹರುನಗರದ ಕಲ್ಲೇಗದಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.

ನೂತನ ಶಾಖೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ ಅವರು ವಹಿಸಲಿದ್ದಾರೆ.

Advertisement

ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, ವಿಧಾನ ಪರಿಷತ್ ಶಾಸಕ ಕಿಶೋರ್‌ ಕುಮಾರ್‌ ಬೊಟ್ಯಾಡಿ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು ಭಾಗವಹಿಸಲಿದ್ದಾರೆ.

ಇವರೊಂದಿಗೆ ಕಲ್ಲೇಗ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್‌ ಕುಮಾರ್‌ ಜೈನ್‌, ಕಲ್ಲೇಗ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್‌ ಕಲ್ಲೇಗ, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್‌ ಜೈನ್‌ ಹಾಗೂ ಅಶ್ವಿನಿ ಕಾಂಪ್ಲೆಕ್ಸ್ ಮಾಲಕ ಕೆ. ರಾಜಾರಾಮ್‌ ಪ್ರಭು ಉಪಸ್ಥಿತರಿರಲಿದ್ದಾರೆ.

ರಜತ ಮಹೋತ್ಸವ ವರ್ಷದ ಸಂಭ್ರಮ ಹಾಗೂ ಆರ್ಥಿಕ ಸಾಧನೆ:

2001ರಲ್ಲಿ ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭಗೊಂಡ ಶ್ರೀ ಸರಸ್ವತಿ ಸಹಕಾರಿಯು ಪ್ರಸ್ತುತ ರಜತ ಮಹೋತ್ಸವ (Silver Jubilee) ವರ್ಷಾಚರಣೆಯ ಸಂಭ್ರಮದಲ್ಲಿದೆ. ಸಂಸ್ಥೆಯು ಜೂನ್ 15, 2026ರ ಅಂಕಿ-ಅಂಶಗಳ ಪ್ರಕಾರ ಭಾರಿ ಪ್ರಗತಿ ಸಾಧಿಸಿದೆ:

ಸದಸ್ಯರು: 52,913 ಜನ ನಂಬಿಕಸ್ಥ ಸದಸ್ಯರ ಬಲ.

ಠೇವಣಿ ಮತ್ತು ಸಾಲ: ಒಟ್ಟು 422 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 400 ಕೋಟಿ ರೂ. ಸಾಲ ವಿತರಿಸಲಾಗಿದೆ.

ಒಟ್ಟು ವ್ಯವಹಾರ: ಸಂಸ್ಥೆಯು ಬರೊಬ್ಬರಿ 822 ಕೋಟಿ ರೂ. ಭಾರಿ ವ್ಯವಹಾರ ದಾಖಲಿಸಿದೆ.

ಲಾಭ ಮತ್ತು ಡಿವಿಡೆಂಡ್: 2026ರ ಮಾರ್ಚ್ ವರ್ಷಾಂತ್ಯಕ್ಕೆ 7.27 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 2025-26ನೇ ಸಾಲಿನಲ್ಲಿ ಸದಸ್ಯರಿಗೆ ಶೇ. 13% ಡಿವಿಡೆಂಡ್ (ಲಾಭಾಂಶ) ವಿತರಿಸಲಾಗಿದೆ. ಗ್ರಾಹಕ ಸ್ನೇಹಿ ಸೇವೆಗೆ ಹೆಸರಾಗಿರುವ ಈ ಸಂಸ್ಥೆಯಲ್ಲಿ 116 ಜನ ನಗುಮೊಗದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಖೆಯಲ್ಲಿ ಆಕರ್ಷಕ ಬಡ್ಡಿದರ, ವಿವಿಧ ಸಾಲಗಳು, ಜೀವವಿಮೆ, ಪಾನ್ ಕಾರ್ಡ್ ಹಾಗೂ ಸುರಕ್ಷಿತ ಸೇಫ್ ಲಾಕರ್ ಸೌಲಭ್ಯಗಳು ಲಭ್ಯವಿವೆ.

ಇದನ್ನೂ ಓದಿ: ರಜತ ಮಹೋತ್ಸವ: ಸರಸ್ವತಿ ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು ಆಚರಣೆ

2 ಕೋಟಿಗೂ ಅಧಿಕ ವೆಚ್ಚದ ಸಾಮಾಜಿಕ ಸೇವೆ

ಆರ್ಥಿಕ ರಂಗದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ಹೊತ್ತಿರುವ ಸಹಕಾರಿಯು 2015ರಲ್ಲಿ ‘ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌’ ಸ್ಥಾಪಿಸಿದೆ. ಇದರ ಮೂಲಕ ಆಶಕ್ತರಿಗೆ ವೈದ್ಯಕೀಯ ನೆರವು, ಉಚಿತ ಆರೋಗ್ಯ ಶಿಬಿರಗಳು, ಶಾಲಾ-ಕಾಲೇಜುಗಳಿಗೆ ಕೊಡುಗೆ, ಬಟ್ಟೆಯ ಕೈಚೀಲ ಹಾಗೂ ತರಕಾರಿ ಬೀಜ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳಿಗಾಗಿ ಇದುವರೆಗೆ 2 ಕೋಟಿ ರೂ.ಗೂ ಅಧಿಕ ಹಣವನ್ನು ವಿನಿಯೋಗಿಸಿದೆ.

ಮುಂಬರುವ ದಿನಗಳಲ್ಲಿ ಸಂಸ್ಥೆಯು ಉಳ್ಳಾಲ ಮತ್ತು ಬಂಟ್ವಾಳದ ಸಿದ್ಧಕಟ್ಟೆಯಲ್ಲೂ ಹೊಸ ಶಾಖೆಗಳನ್ನು ತೆರೆಯಲು ಸಜ್ಜಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ನೆಹರುನಗರದ ನೂತನ ಶಾಖೆಯ ಸೌಲಭ್ಯ ಪಡೆದುಕೊಳ್ಳಲು ಕೋರಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *