ಬೆಳ್ತಂಗಡಿ : ಧನುಪೂಜೆಗೆ ತೆರಳಿದ ಬಾಲಕ ಶವವಾಗಿ ಪತ್ತೆಯಾದ ಘಟನೆ ನಿನ್ನೆ ಬೆಳ್ತಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಗೆಕಾರಣ ಕಾಡುಪ್ರಾಣಿಗಳಿಂದಾದ ದಾಳಿ ಎಂದು ಊಹಿಸಲಾಗಿದ್ದರೂ ಇದೀಗ ಮಹತ್ತರ ತಿರುವು ಪಡೆದುಕೊಂಡಿದೆ.
ಹೌದು… ನಿನ್ನೆಯಷ್ಟೇ ದೇವಸ್ಥಾನಕ್ಕೆ ಹೋಗಲು ಬೆಳಗ್ಗೆ ಮನೆಯಿಂದ ಹೊರಟಿದ್ದ ಶಾಲಾ ವಿದ್ಯಾರ್ಥಿಯ ಶವ ಕೆರೆಯಲ್ಲಿ ಸಿಕ್ಕಿರುವುದು ವರದಿಯಾಗಿತ್ತು. ಆದರೆ ಇದೀಗ ಈ ಘಟನೆಯ ಹಿಂದೆ ಬೇರೆ ಏನೋ ಕೈವಾಡವಿದೆ ಎಂಬೋದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಇದು ಪೂರ್ವಯೋಜಿತ ಹಾಗೂ ಭೀಕರ ಹತ್ಯೆಯಾಗಿರಬಹುದೆಂದು ಸೂಚಿಸಿದೆ.

ವೆನ್‌ಲಾಕ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆ ;
ಮಂಗಳೂರು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಮೂರು ಬಾರಿ ಭಾರೀ ಹೊಡೆತ ನೀಡಿರುವುದು ಪತ್ತೆಯಾಗಿದೆ. ತೀಕ್ಷ್ಣ ಆಯುಧ ಅಥವಾ ಬೇರೊಂದು ವಸ್ತುವಿನಿಂದ ಈ ದಾಳಿ ನಡೆದಿರಬಹುದೆಂದು ಶಂಕಿಸಲಾಗಿದೆ. ಹೊಡೆತಗಳ ತೀವ್ರತೆಗೆ ಕಪಾಲ ಮುರಿದಿದ್ದು, ಸುಮಂತ್ ಅವರನ್ನು ಅಚೇತನ ಸ್ಥಿತಿಯಲ್ಲಿ ಕೆರೆಗೆ ತಂದು ತಳ್ಳಿರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ವರದಿ ಸೂಚಿಸಿದೆ. ಶ್ವಾಸಕೋಶಕ್ಕೆ ನೀರು ಸೇರಿರುವುದರಿಂದ ಉಸಿರುಗಟ್ಟುವಿಕೆಯಿಂದಲೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : Belthangady : ಧನುಪೂಜೆಗೆಂದು ತೆರಳಿದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ
ತಲೆಗೆ ಹೊಡೆತ ಬಿದ್ದ ತಕ್ಷಣವೇ ಸುಮಂತ್ ಅರೆಅಚೇತನ ಸ್ಥಿತಿಗೆ ಹೋಗಿದ್ದರಿಂದ ಪ್ರತಿರೋಧ ತೋರಲು ಸಾಧ್ಯವಾಗಿರಲಿಲ್ಲ ಎಂದು ಶಂಕಿಸಲಾಗಿದೆ. ಶವ ಪತ್ತೆಯಾದಾಗಲೂ ಅವರು ಚಪ್ಪಲಿ ಧರಿಸಿದ್ದುದನ್ನು ಕಂಡು ಸಾಕ್ಷಿದಾರರು ತಿಳಿಸಿದ್ದಾರೆ. ಇದರಿಂದ ಅವರು ಓಡಿಹೋಗಲು ಅಥವಾ ಹೋರಾಟ ನಡೆಸಲು ಸಾಧ್ಯವಾಗಿಲ್ಲ ಎಂಬ ಅನುಮಾನ ಮತ್ತಷ್ಟು ದೃಢವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

