Breaking News

ಶಾಲಾ ಆವರಣದಲ್ಲೇ ಶಿಕ್ಷಕಿಗೆ 30 ಸೆಕೆಂಡುಗಳಲ್ಲಿ 30 ಬಾರಿ ಇರಿತ

ಫರೀದಾಬಾದ್ : ಖಾಸಗಿ ಶಾಲೆಯೊಂದರ ಆವರಣದಲ್ಲಿ ಮಾರುವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಶಾಲಾ ಶಿಕ್ಷಕಿಗೆ ಸಾರ್ವಜನಿಕವಾಗಿ, ಕೇವಲ 30 ಸೆಕೆಂಡುಗಳಲ್ಲಿ 30ಕ್ಕೂ ಹೆಚ್ಚು ಬಾರಿ ಭೀಕರವಾಗಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹರ್ಯಾಣದ ಫರೀದಾಬಾದ್‌ನಲ್ಲಿ ನಡೆದಿದೆ.

ಫರೀದಾಬಾದ್‌ನ ಸಿಕ್ರೋನಾ ಗ್ರಾಮದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 29 ವರ್ಷದ ಸಂಧ್ಯಾ ಎಂಬ ಶಿಕ್ಷಕಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ಬೆಳಿಗ್ಗೆ 9:30 ರ ಸುಮಾರಿಗೆ ಮುಖಕ್ಕೆ ಮಾಸ್ಕ್ ಧರಿಸಿ ಬಂದ ವ್ಯಕ್ತಿಯೊಬ್ಬ ಶಾಲೆಯ ಗೇಟ್ ಬಳಿ ನಿಂತು ಶಿಕ್ಷಕಿ ಸಂಧ್ಯಾ ಅವರನ್ನು ಹೆಸರು ಹಿಡಿದು ಕರೆದಿದ್ದಾನೆ.

ಶಿಕ್ಷಕಿ ಸಂಧ್ಯಾ ಆತನನ್ನು ಭೇಟಿಯಾಗಲು ಗೇಟ್ ಬಳಿ ಬರುತ್ತಿದ್ದಂತೆ, ಆಕೆಯ ಕುತ್ತಿಗೆ ಹಿಡಿದು ಹೊರಗೆ ಎಳೆದು ಮುಖ, ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಚಾಕುವಿನಿಂದ ಇರಿಯಲು ಪ್ರಾರಂಭಿಸಿದ್ದಾನೆ.ಸಿಸಿಟಿವಿ  ದೃಶ್ಯಾವಳಿಗಳಲ್ಲಿ ಸೆರೆಯಾಗಿರುವಂತೆ, ಮಾಸ್ಕ್ ಧರಿಸಿದ ಹಂತಕ ಶಿಕ್ಷಕಿಯನ್ನು ನೆಲಕ್ಕೆ ತಳ್ಳಿ ಸತತವಾಗಿ ಇರಿದಿದ್ದಾನೆ. ಕಿರುಚಾಟ ಕೇಳಿ ರಕ್ಷಣೆಗೆ ಬಂದ ಶಾಲಾ ಆಡಳಿತಾಧಿಕಾರಿಗೂ ಚಾಕು ತೋರಿಸಿ ಬೆದರಿಕೆ ಒಡ್ಡಿದ ಆತ, ಸಂಧ್ಯಾ ಅವರ ಹೊಟ್ಟೆ ಹಾಗೂ ಮುಖಕ್ಕೆ ಮತ್ತೊಮ್ಮೆ 20ಕ್ಕೂ ಹೆಚ್ಚು ಬಾರಿ ಇರಿದು, ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಡಿ: ಸಾಲು ಸಾಲು ರಾಜೀನಾಮೆಗೆ ಮುಂದಾದ ಶಾಸಕರು

ಶಾಲಾ ಸಿಬ್ಬಂದಿ ತಕ್ಷಣವೇ ಸಂಧ್ಯಾ ಅವರನ್ನು ಅಲ್ ಫಲಾಹ್ ಆಸ್ಪತ್ರೆಗೆ  ಕರೆದೊಯ್ದರಾದರೂ, ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.ಕೊಲೆಯಾದ ಶಿಕ್ಷಕಿ ಸಂಧ್ಯಾ ಅವರು ಈ ಹಿಂದೆ ಕೊಲೆಗಾರನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಿಂಬಾಲಿಸುವಿಕೆ  ಕುರಿತು ಪೊಲೀಸ್ ದೂರು ನೀಡಿದ್ದರು ಎಂಬುದು ತಿಳಿದುಬಂದಿದೆ.ದಾಳಿ ನಡೆದ ಕೇವಲ 2 ಗಂಟೆಗಳ ಒಳಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕೋಟ್ ಗ್ರಾಮದ ನಿವಾಸಿ 21 ವರ್ಷದ ಅಮಿತ್ ಎಂಬ ಆರೋಪಿಯನ್ನು ಬಂಧಿಸಿ, ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *