Breaking News

ಚಂದನವನದ ಖ್ಯಾತ ಹಿರಿಯ ನಟ ವಿಜಯಕುಮಾರ್ ಜಿತೂರಿ ಇನ್ನಿಲ್ಲ

ಬೆಂಗಳೂರು : ಕನ್ನಡ ಕಿರುತೆರೆ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತಮ್ಮ ನೈಜ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಹಿರಿಯ ಅಭಿನೇತ ವಿಜಯಕುಮಾರ್ ಜಿತೂರಿ (Vijay Kumar Jituri) ಅವರು ಸೋಮವಾರ (ಆಗಸ್ಟ್ 10) ಸಂಜೆ ತಮ್ಮ ಹುಟ್ಟೂರಾದ ಗದಗದಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯ ಮತ್ತು ವಯೋಸಹಜ ಕಾರಣಗಳಿಂದ ಬಳಲುತ್ತಿದ್ದ ಅವರು ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹಿರಿಯ ಕಲಾವಿದನ ಅಗಲಿಕೆಗೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

ವಿಜಯಕುಮಾರ್ ಜಿತೂರಿ ಅವರು ಮೂಲತಃ ಗದಗ ಜಿಲ್ಲೆಯವರಾಗಿದ್ದು, ರಂಗಭೂಮಿ ಮೂಲಕ ತಮ್ಮ ಅಭಿನಯ ಪಯಣವನ್ನು ಆರಂಭಿಸಿದ್ದರು. ರಂಗದ ಮೇಲಿನ ಇವರ ಖಡಕ್ ಅಭಿನಯ ಹಾಗೂ ಸಂಭಾಷಣೆ ಚಾತುರ್ಯ ವೀಕ್ಷಕರ ಗಮನ ಸೆಳೆದಿತ್ತು.

ಇದನ್ನೂ ಓದಿ: ಟಾಕ್ಸಿಕ್’ ಸಿನಿಮಾದ ‘ಮನಮೋಹಕ’ ಹಾಡಿಗೆ ಜೀವ ತುಂಬಿದ ಕರಾವಳಿ ಕಂಪು

ರಂಗಭೂಮಿಯ ನಂತರ ಕಿರುತೆರೆಗೆ ಕಾಲಿಟ್ಟ ಇವರು ಹಲವು ಜನಪ್ರಿಯ ಕನ್ನಡ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದರು.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *