Breaking News

ಕತ್ತರಿಸಿದ ಆಪಲ್ ಕಪ್ಪಾಗುವುದು ಏಕೆ? ಹಣ್ಣು ಹಾಳಾಗದಂತೆ ತಡೆಯಲು ಇಲ್ಲಿದೆ ಸರಳ ಟಿಪ್ಸ್

ಆಪಲ್ (ಸೇಬು) ಹಣ್ಣನ್ನು ಕತ್ತರಿಸಿ ಕೆಲವೇ ನಿಮಿಷಗಳಲ್ಲಿ ಅದರ ಬಿಳಿ ಬಣ್ಣ ಬದಲಾಗಿ ಕಂದು ಅಥವಾ ಕಪ್ಪಾಗುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಸಾಮಾನ್ಯವಾಗಿ ಹಣ್ಣು ಹಾಳಾಗಿದೆ ಎಂದು ಭಾವಿಸಿ ಎಸೆಯುವುದುಂಟು, ಆದರೆ ಇದು ಹಣ್ಣು ಕೆಡುವುದಲ್ಲ; ಬದಲಿಗೆ ಗಾಳಿಯೊಂದಿಗೆ ನಡೆಯುವ ಒಂದು ನೈಸರ್ಗಿಕ ರಾಸಾಯನಿಕ ಕ್ರಿಯೆಯಾಗಿದೆ.

ಆಪಲ್ ಬಣ್ಣ ಬದಲಾಗಲು ಕಾರಣವೇನು?

ಆಪಲ್ ಕತ್ತರಿಸಿದಾಗ ಅದರ ಕೋಶಗಳು (Cells) ಹಾನಿಗೊಳಗಾಗಿ, ಒಳಗಿನ ಭಾಗವು ಗಾಳಿಯಲ್ಲಿರುವ ಆಮ್ಲಜನಕದ (Oxygen) ಸಂಪರ್ಕಕ್ಕೆ ಬರುತ್ತದೆ. ಈ ವೇಳೆ ಆಪಲ್‌ನಲ್ಲಿರುವ ಪಾಲಿಫಿನಾಲ್ ಆಕ್ಸಿಡೇಸ್ (PPO) ಎಂಬ ಕಿಣ್ವವು (Enzyme) ಆಕ್ಸಿಡೀಕರಣಗೊಂಡು (Oxidation) ಹಣ್ಣಿನ ಮೇಲೆ ಕಂದು ಬಣ್ಣದ ಪಿಗ್ಮೆಂಟ್ ಉಂಟುಮಾಡುತ್ತದೆ.

ಖಾದ್ಯ ಯೋಗ್ಯವೇ?: ಯುಎಸ್‌ಡಿಎ (USDA) ಮಾರ್ಗದರ್ಶನದಂತೆ, ಬಣ್ಣ ಬದಲಾದ ಆಪಲ್ ತುಂಡುಗಳು ತಿನ್ನಲು ಸುರಕ್ಷಿತವಾಗಿರುತ್ತವೆ. ಆದರೆ ಅವುಗಳ ರುಚಿ ಮತ್ತು ವಿನ್ಯಾಸದಲ್ಲಿ (Texture) ಸ್ವಲ್ಪ ವ್ಯತ್ಯಾಸವಿರಬಹುದು.

ಇದನ್ನೂ ಓದಿ: ಏಮ್ಸ್ ವೈದ್ಯರ ಅದ್ಭುತ ಸಾಧನೆ: 209 ಕೆಜಿ ತೂಕವಿದ್ದ ವ್ಯಕ್ತಿಗೆ ಯಶಸ್ವಿ ಬೆರಿಯಾಟ್ರಿಕ್ ಸರ್ಜರಿ, 49 ಕೆಜಿ ತೂಕ ಇಳಿತ

ಆಪಲ್ ಕಪ್ಪಾಗದಂತೆ ತಡೆಯಲು 4 ಸರಳ ಉಪಾಯಗಳು:

ನಿಂಬೆ ರಸದ ನೀರು: ನಿಂಬೆ ರಸದಲ್ಲಿರುವ ಆಮ್ಲೀಯತೆ ಮತ್ತು ವಿಟಮಿನ್ ಸಿ ಕಿಣ್ವಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. 1 ಲೀಟರ್ ನೀರಿಗೆ 3 ಚಮಚ ನಿಂಬೆ ರಸ ಬೆರೆಸಿ, ಆಪಲ್ ತುಂಡುಗಳನ್ನು 3-5 ನಿಮಿಷ ನೆನೆಸಿ ತೆಗೆಯಿರಿ.

ಉಪ್ಪು ನೀರಿನ ಸ್ನಾನ: ಅರ್ಧ ಚಮಚ ಉಪ್ಪನ್ನು 1 ಕಪ್ ನೀರಿನಲ್ಲಿ ಕರಗಿಸಿ, ಆಪಲ್ ತುಂಡುಗಳನ್ನು 5 ನಿಮಿಷ ನೆನೆಸಿ, ನಂತರ ತೊಳೆದು ಬಳಸಿ. ಇದು ಆಕ್ಸಿಡೀಕರಣವನ್ನು ತಡೆಯುತ್ತದೆ.

ಗಾಳಿ ತಗದಂತೆ ಇಡುವುದು: ಕತ್ತರಿಸಿದ ಆಪಲ್ ತುಂಡುಗಳನ್ನು ಏರ್‌ಟೈಟ್ (Airtight) ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಗಾಳಿಯ ಸಂಪರ್ಕ ತಪ್ಪಿ ಬಣ್ಣ ಬದಲಾಗುವುದಿಲ್ಲ.

ಬ್ರಾಂಚಿಂಗ್ (ಬಿಸಿ ನೀರಿನಲ್ಲಿ ಬೇಯಿಸುವುದು): ಸ್ವೀಟ್ಸ್ ಅಥವಾ ಬೇಕರಿ ತಿನಿಸುಗಳಿಗೆ ಆಪಲ್ ಬಳಸುವುದಾದರೆ, ನೀರಿಗೆ ಹಾಕಿ ಲಘುವಾಗಿ ಕುದಿಸುವುದರಿಂದ (Blanching) ಕಿಣ್ವಗಳು ನಿಷ್ಕ್ರಿಯಗೊಳ್ಳುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *