Breaking News

ಗುಜರಾತ್‌ ಕಡಲಿನಲ್ಲಿ ಮುಳುಗುತ್ತಿದ್ದ ದೋಣಿ: 9 ಮಂದಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

ದಮನ್: ಅರೇಬಿಯನ್ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಲ್ಲಿದ್ದ 9 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್‌ನ (ICG) ದಮನ್ ಏರ್‌ಸ್ಟೇಷನ್ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಆಪತ್ತಿನಲ್ಲಿರುವ ದೋಣಿಯಿಂದ ಬಟನ್ ಒತ್ತಿದ ಸSOS ಕರೆಯನ್ನು (Distress Call) ಸ್ವೀಕರಿಸಿದ ತಕ್ಷಣವೇ ದಮನ್ ಕೋಸ್ಟ್ ಗಾರ್ಡ್ ಏರ್‌ಸ್ಟೇಷನ್ ಚುರುಕುಗೊಂಡಿತು.

ಘಟನಾ ಸ್ಥಳಕ್ಕೆ ತಕ್ಷಣವೇ ಭಾರತೀಯ ಕರಾವಳಿ ಕಾವಲು ಪಡೆಯ ಅತ್ಯಾಧುನಿಕ ‘ಚೇತಕ್’ ಹೆಲಿಕಾಪ್ಟರ್ (Chetak Helicopter) ಅನ್ನು ರವಾನಿಸಲಾಯಿತು. ಕಡಲಿನಲ್ಲಿ ಮುಳುಗಡೆಯಾಗುತ್ತಿದ್ದ ದೋಣಿಯಲ್ಲಿದ್ದ ಒಂಬತ್ತೂ ಮೀನುಗಾರರನ್ನು ಚೇತಕ್ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಏರ್‌ಲಿಫ್ಟ್ ಮಾಡಿ ಸುರಕ್ಷಿತ ಸ್ಥಳಕ್ಕೆ ತರಲಾಯಿತು.

ಇದನ್ನೂ ಓದಿ: ಖಾಂಡ್ವಾದಲ್ಲಿ ವಿನೂತನ ಪ್ರತಿಭಟನೆ: ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ

ಇಲ್ಲಿದೆ ನೋಡಿ ವಿಡಿಯೋ:

ರಕ್ಷಿಸಲ್ಪಟ್ಟವರಲ್ಲಿ ಗಾಯಗೊಂಡಿದ್ದ ಮೂವರು ಮೀನುಗಾರರಿಗೆ ದಮನ್‌ನ ICGAS ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಉಪಚಾರಕ್ಕಾಗಿ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಸ್ಟ್ ಗಾರ್ಡ್ ಪಡೆಯ ಈ ಕ್ಷಿಪ್ರ ಹಾಗೂ ಸಾಹಸಮಯ ಕಾರ್ಯಾಚರಣೆಗೆ ಎಲ್ಲೆಡೆಯಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *