Breaking News

ಭಾರತದ ಮಾರುಕಟ್ಟೆಗೆ ಹೊಚ್ಚ ಹೊಸ ‘ಹೋಂಡಾ ರೆಬೆಲ್ 300’ ಬೈಕ್ ಬಿಡುಗಡೆ

ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೋಂಡಾ, ಭಾರತದಲ್ಲಿ ತನ್ನ ಬಹುನಿರೀಕ್ಷಿತ ‘ಹೋಂಡಾ ರೆಬೆಲ್ 300’ (Honda Rebel 300) ಬಾಬರ್ ಸೈಲ್ ಕ್ರೂಸರ್ ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಬೈಕ್‌ನ ‘ಸ್ಟ್ಯಾಂಡರ್ಡ್’ ಆವೃತ್ತಿಯ ಬೆಲೆ ರೂ. 2.22 ಲಕ್ಷ ಹಾಗೂ ‘ಇ-ಕ್ಲಚ್’ (E-Clutch) ಆವೃತ್ತಿಯ ಬೆಲೆ ರೂ. 2.62 ಲಕ್ಷ (ಎಕ್ಸ್-ಶೋರೂಮ್) ಎಂದು ನಿಗದಿಪಡಿಸಲಾಗಿದೆ. ಭಾರತದಲ್ಲೇ ತಯಾರಾಗುತ್ತಿರುವ ಈ ಕ್ರೂಸರ್ ಬೈಕ್, ಹೋಂಡಾದ ಪ್ರೀಮಿಯಂ ‘ಬಿಗ್‌ವಿಂಗ್’ (Honda BigWing) ಶೋರೂಮ್‌ಗಳ ಮೂಲಕ ಮಾತ್ರ ಮಾರಾಟವಾಗಲಿದೆ.

ಈ ಬೈಕ್‌ನಲ್ಲಿ 286 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೋಲ್ಡ್ ಎಂಜಿನ್ ನೀಡಲಾಗಿದ್ದು, ಇದು 30hp ಪವರ್ ಹಾಗೂ 27.5 Nm ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇ-ಕ್ಲಚ್ ಆವೃತ್ತಿಯಲ್ಲಿ ಹೋಂಡಾದ ಎಲೆಕ್ಟ್ರಾನಿಕ್ ಕ್ಲಚ್ ಸಿಸ್ಟಮ್ ಇದ್ದು, ಚಾಲಕರು ಕ್ಲಚ್ ಲಿವರ್ ಬಳಸದೆಯೇ ಗೇರ್ ಬದಲಾಯಿಸಬಹುದು. ಬಯಸಿದಲ್ಲಿ ಮ್ಯಾನುವಲ್ ಆಗಿಯೂ ಕ್ಲಚ್ ಬಳಸಲು ಅವಕಾಶವಿದೆ.

ಟಿಯರ್‌ಡ್ರಾಪ್ ಶೇಪ್ ಫ್ಯೂಯಲ್ ಟ್ಯಾಂಕ್, ರೌಂಡ್ ಎಲ್‌ಇಡಿ ಹೆಡ್‌ಲ್ಯಾಂಪ್, ಡುಯಲ್ ಪೀಸ್ ಸೀಟ್ ಹಾಗೂ ಸಣ್ಣ ಮಾದರಿಯ ಎಕ್ಸಾಸ್ಟ್ ಹೊಂದಿದೆ. ಬೈಕ್‌ನ ಸೀಟ್ ಎತ್ತರ 690 ಎಂಎಂ ಇದ್ದು, ಸಣ್ಣ ಕಾಯದ ಚಾಲಕರಿಗೂ ಚಾಲನೆ ಮಾಡಲು ಅತ್ಯಂತ ಸರಳವಾಗಿದೆ.

ರೌಂಡ್ ಟಿಎಫ್‌ಟಿ (TFT) ಡಿಸ್ಪ್ಲೇ, ಹೋಂಡಾ ರೋಡ್‌ಸಿಂಕ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಎಲ್‌ಇಡಿ ಲೈಟಿಂಗ್ ಹಾಗೂ ಡುಯಲ್ ಚಾನೆಲ್ ಎಬಿಎಸ್ (ABS) ಸೌಲಭ್ಯಗಳಿವೆ. ಹೋಂಡಾ ರೆಬೆಲ್ 300 ನೇರವಾಗಿ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 (Royal Enfield Goan Classic 350) ಬೈಕ್‌ಗೆ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು

ಸ್ಟ್ಯಾಂಡರ್ಡ್ ರೆಬೆಲ್ 300 (ರೂ. 2.22 ಲಕ್ಷ), ಗೋವಾನ್ ಕ್ಲಾಸಿಕ್ 350 (ರೂ. 2.25 ಲಕ್ಷ – 2.28 ಲಕ್ಷ) ಗಿಂತ ಕೊಂಚ ಅಗ್ಗವಾಗಿದೆ. ಆದರೆ, ಅತ್ಯಾಧುನಿಕ ಇ-ಕ್ಲಚ್ ತಂತ್ರಜ್ಞಾನ ಹೊಂದಿರುವ ಆವೃತ್ತಿಯು ಗೋವಾನ್ ಕ್ಲಾಸಿಕ್‌ಗಿಂತ ಸುಮಾರು ₹34,000 ದಿಂದ ₹37,000 ದಷ್ಟು ಹೆಚ್ಚಿನ ಬೆಲೆ ಹೊಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *