Breaking News

ಸುಳ್ಯ ಪೊಲೀಸ್ ಠಾಣೆಯ ನೂತನ ಎಸ್‌ಐ ಉದಯ ರವಿಗೆ ಆಟೋ ಚಾಲಕರ ಸಂಘದಿಂದ ಆತ್ಮೀಯ ಅಭಿನಂದನೆ

ಸುಳ್ಯ: ಸುಳ್ಯ ಪೊಲೀಸ್ ಠಾಣೆಗೆ ನೂತನ ಸಬ್ ಇನ್‌ಸ್ಪೆಕ್ಟರ್ (SI) ಆಗಿ ಅಧಿಕಾರ ವಹಿಸಿಕೊಂಡ ಉದಯ ರವಿ ಅವರನ್ನು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ (ರಿ.) ಬಿಎಂಎಸ್ (BMS) ಸಂಯೋಜಿತ ಪದಾಧಿಕಾರಿಗಳು ಭೇಟಿಯಾಗಿ ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದಿಸಿದರು.

ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಅವರು ನೂತನ ಎಸ್‌ಐ ಅವರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು. ಇದೇ ವೇಳೆ ಸಹೋದರತೆಯ ಸಂಕೇತವಾಗಿ ರಕ್ಷಾ ಬಂಧನ (ರಾಖಿ) ಕಟ್ಟಿ, ಸೌಹಾರ್ದತೆಯ ಬಾಂಧವ್ಯವನ್ನು ಸಾರಿದರು.

ಈ ಅಭಿನಂದನಾ ಸಮಾರಂಭದಲ್ಲಿ ಆಟೋ ಚಾಲಕರ ಸಂಘದ ಪ್ರಮುಖ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್, ಕಾನೂನು ಸಲಹೆಗಾರರು ಭಾಸ್ಕರ್ ರಾವ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ, ಮಾಜಿ ಅಧ್ಯಕ್ಷರು ರಾಧಾಕೃಷ್ಣ ಬೈತಡ್ಕ, ನಿರ್ದೇಶಕರು ಹಾಗೂ ಸದಸ್ಯರುಗಳಾದ ಭಾನು ಪ್ರಕಾಶ್, ಹರೀಶ್ ನೆಕ್ರಾಜೆ, ಪ್ರಸನ್ನ ರಥಬೀದಿ, ಲೋಕೇಶ್ (ಬಸ್ ನಿಲ್ದಾಣ) ಹಾಗೂ ಚಾಮಯ್ಯ (ಮಾರ್ಕೆಟ್ ರಸ್ತೆ).

ಇದನ್ನೂ ಓದಿ: ಭಾರತದಲ್ಲಿ ಎವರೆಸ್ಟ್‌, ಲಾಲ್ಜಿ ಗೋಧೂ ಹಿಂಗುಗಳ ಮಾರಾಟಕ್ಕೆ FSSAI ತಾತ್ಕಾಲಿಕ ನಿಷೇಧ

ಆಟೋ ಚಾಲಕರು ಹಾಗೂ ಪೊಲೀಸರ ನಡುವೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ಹಾಗೂ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಸಹಕರಿಸುವ ಕುರಿತು ಈ ಸಂದರ್ಭದಲ್ಲಿ ಸೌಹಾರ್ದಯುತ ಚರ್ಚೆ ನಡೆಯಿತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *