Breaking News

ರೀಲ್ಸ್‌ಗಾಗಿ 30 ಅಡಿ ಎತ್ತರದಿಂದ ಜಿಗಿದ ಯುವಕ: ಎರಡೂ ಕಾಲುಗಳು ಮುರಿದು ಆಸ್ಪತ್ರೆಗೆ ದಾಖಲು

ಝಾನ್ಸಿ : ಸೋಷಿಯಲ್ ಮೀಡಿಯಾ ಕ್ರೇಜ್ ಹಾಗೂ ರೀಲ್ಸ್ (Reels) ಹುಚ್ಚು ಮತ್ತೊಬ್ಬ ಯುವಕನನ್ನು ಸಂಕಷ್ಟಕ್ಕೆ ತಳ್ಳಿದೆ. ವೀಡಿಯೊ ಚಿತ್ರೀಕರಣ ಮಾಡುವ ಭರದಲ್ಲಿ ಸುಮಾರು ೩೦ ಅಡಿ ಎತ್ತರದಿಂದ ಅಣೆಕಟ್ಟಿಗೆ ಧುಮುಕಿದ ಯುವಕನೊಬ್ಬ, ಎರಡೂ ಕಾಲುಗಳನ್ನು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ಝಾನ್ಸಿಯ ಪಹುಜ್ ಅಣೆಕಟ್ಟಿನಲ್ಲಿ (Pahuj Dam) ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. 32 ವರ್ಷದ ಯುವಕನೊಬ್ಬ ರೀಲ್ಸ್ ವೀಡಿಯೊ ಮಾಡಲು ಅಣೆಕಟ್ಟಿನ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದನು. ನೀರು ಆಳವಾಗಿರುವ ಸ್ಥಳಕ್ಕೆ ಬೀಳುವ ಬದಲಾಗಿ, ನೀರಿಲ್ಲದ ಕಲ್ಲುಬಂಡೆಗಳಿದ್ದ ತಗ್ಗು ಪ್ರದೇಶಕ್ಕೆ ಆತ ಬಿದ್ದಿದ್ದಾನೆ.

ಕಲ್ಲಿನ ಮೇಲೆ ಬಿದ್ದ ತೀವ್ರತೆಗೆ ಯುವಕನ ಎರಡೂ ಕಾಲುಗಳ ಮೂಳೆಗಳು ಮುರಿದು ಬಿದ್ದಿವೆ. ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಜೊತೆಯಲ್ಲಿದ್ದವರು ಯುವಕನನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಲಿಂಗಕ್ಕೆ 6 ಬಾರಿ ನಮಸ್ಕರಿಸಿ ಲಿಂಗದ ಮೇಲಿದ್ದ ಹಾವಿನ ಕಿರೀಟವನ್ನು ಚೀಲಕ್ಕೆ ತುಂಬಿ ಕೊಂಡೊಯ್ದ ಯುವಕ: ಸಿಸಿಟಿವಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ವಿವ್ಸ್‌ಗಾಗಿ ಯುವಜನತೆ ಜೀವವನ್ನೇ ಪಣಕ್ಕಿಟ್ಟು ಇಂತಹ ಸಾಹಸಗಳಿಗೆ ಕೈಹಾಕುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *