ದೆಹಲಿ: ಭಾರತರತ್ನ, ನಾದಯೋಗಿ ಎಂ.ಎಸ್. ಸುಬ್ಬಲಕ್ಷ್ಮಿ ಅವರ ದಿವ್ಯ ಕಂಠಸಿರಿಯಲ್ಲಿ ಮೂಡಿಬಂದಿದ್ದ ಕಾಲಾತೀತ ಭಕ್ತಿಗೀತೆ ‘ಮೈತ್ರೀಂ ಭಜತ’ (Maitreem Bhajata) ಆಲಿಸುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಭಾವುಕರಾದ ಭಾವಪೂರ್ಣ ಘಟನೆ ನಡೆದಿದೆ.
ಜಗತ್ತಿಗೆ ಜಾಗತಿಕ ಶಾಂತಿ ಹಾಗೂ ಪ್ರೀತಿಯ ಸಂದೇಶ ಸಾರುವ ‘ಮೈತ್ರೀಂ ಭಜತ’ ಗೀತೆಯು ಅತ್ಯಂತ ಪವಿತ್ರವಾದ ಮೂರು ಉನ್ನತ ಮಾನವೀಯ ಗುಣಗಳನ್ನು ಸಾರುತ್ತದೆ.
ಎಂ.ಎಸ್. ಸುಬ್ಬಲಕ್ಷ್ಮಿ ಅವರ ಆತ್ಮೀಯ ಧ್ವನಿಯಲ್ಲಿ ಮೂಡಿಬಂದ ಈ ಸಾಲುಗಳಲ್ಲಿದ್ದ ಸಾರ್ವಕಾಲಿಕ ಮೌಲ್ಯಗಳು ಹಾಗೂ ಭಕ್ತಿರಸಕ್ಕೆ ತನ್ಮಯರಾದ ಸಚಿವೆ ನಿರ್ಮಲಾ ಸೀತಾರಾಮನ್, ಹಾಡಿನ ಭಾವಕ್ಕೆ ಮೆಚ್ಚಿ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಾ ಅತ್ಯಂತ ಭಾವುಕರಾದರು.
ಇದನ್ನೂ ಓದಿ: ಆಹಾರ ಸುರಕ್ಷತೆಗೆ ಕ್ಯೂಆರ್ ಕೋಡ್ ಕಡ್ಡಾಯ, ಮಂಗಳೂರು ದಸರಾ ಸಂಭ್ರಮ: ಯು.ಟಿ. ಖಾದರ್ ಮಹತ್ವದ ಘೋಷಣೆ
ಸಂಗೀತಕ್ಕೆ ಗಡಿ, ಅಧಿಕಾರ ಅಥವಾ ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರ ಮನಸ್ಸನ್ನು ಸ್ಪರ್ಶಿಸುವ ಶಕ್ತಿ ಇದೆ ಎಂಬುದಕ್ಕೆ ಈ ಸನ್ನಿವೇಶ ಮತ್ತೊಮ್ಮೆ ಸಾಕ್ಷಿಯಾಯಿತು.

