ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಲೇ ಇದೆ. ಹಲವಾರು ಜನರು ಇದಕ್ಕೆ ಬಲಿಯಾಗಿ ಹಣ ಕಳೆದುಕೊಂಡವರಿದ್ದಾರೆ. ಇಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಗೆ ಮೋಸ ಮಾಡಿದ್ದಲ್ಲದೆ ಆಕೆಯ ಸಂಬಂಧಿಕರು, ಸ್ನೇಹಿತರಿಂದ ರೂ.1.75 ಕೋಟಿ ರೂಪಾಯಿ ಪಡೆದಿರುವ ಆರೋಪ ಸಾಫ್ಟ್‌ವೇರ್ ಎಂಜಿನಿಯರ್ ವಿರುದ್ಧ ಕೇಳಿಬಂದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಆರೋಪಿಗೆ 2024 ಮಾರ್ಚ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಗೆ ತಾನು ದೊಡ್ಡ ಉದ್ಯಮಿ ಎಂದು ಹೇಳಿಕೊಂಡಿದ್ದು ರೂ.715 ಕೋಟಿ ಆಸ್ತಿ ಇದೆ ಎಂದು ಹೇಳಿದ್ದನು. ಮದುವೆ ಆದರೆ ನಿನ್ನನ್ನೇ ಆಗುತ್ತೇನೆ ಎಂದು ಯುವತಿಗೆ ಹೇಳಿದ್ದಲ್ಲದೆ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಪರಿಚಯ ಮಾಡಿಸಿದ್ದನು.

ಇದನ್ನೂ ಓದಿ:ಹುಣಸೂರು: 10 ಕೋಟಿ ಮೌಲ್ಯದ ಚಿನ್ನ ಕಳವು ಪ್ರಕರಣ: ಇಬ್ಬರ ಬಂಧನ
ನಂತರ ಆಸ್ತಿ ಸಂಬಂಧ ಇಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅಕೌಂಟ್ ಸೀಜ್ ಆಗಿದೆ. ಸ್ವಲ್ಪ ಹಣದ ಅವಶ್ಯಕತೆ ಇದೆ ಎಂದು ಮೊದಲು 15 ಸಾವಿರ ಹಣ ಪಡೆದು, ನಂತರ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಅಂತಾ ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದನು.
ಜೊತೆಗೆ ಯುವತಿಯ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದನು. ಹಂತ ಹಂತವಾಗಿ ಒಟ್ಟು ರೂ. 1.75 ಕೋಟಿ ಹಣ ಪಡೆದಿದ್ದಾನೆ ಎಂದು ದೂರು ದಾಖಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

