ಶಿವನ ದೇವಸ್ಥಾನದ ಆವರಣದಲ್ಲಿ ನಡೆದ ಹೃದಯಸ್ಪರ್ಶಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. ಜನರು ಇದೊಂದು ಉತ್ತಮ ವಿಡಿಯೋ ಎಂದರೆ, ಇನ್ನು ಕೆಲವರು ಇದೊಂದು ವ್ಯಾಪರವಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಇಂಟರ್ನೆಟ್ನಲ್ಲಿ ಎಲ್ಲರ ಮನ ಗೆಲ್ಲುತ್ತಿದೆ. ಭಕ್ತಿ ಮತ್ತು ಪ್ರಾಮಾಣಿಕತೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಈ ಬಾಲಕನೇ ಸಾಕ್ಷಿ.ಸಾಮಾನ್ಯವಾಗಿ ದೇವಸ್ಥಾನಗಳ ಮುಂದೆ ಹಿರಿಯರು ಅಥವಾ ಪಂಡಿತರು ಆಶೀರ್ವಾದ ನೀಡುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ, ತಲೆಯಲ್ಲಿ ವಿಭೂತಿ ಧರಿಸಿ, ಕಣ್ಣಲ್ಲಿ ಅತೀವವಾದ ಶ್ರದ್ಧೆ ತುಂಬಿಕೊಂಡಿರುವ ಈ ಬಣ್ಣದ ಬಾಲಕ, ಭಕ್ತರಿಂದ ಕೇವಲ 10 ರೂ. ಕಾಣಿಕೆ ಸ್ವೀಕರಿಸಿ ಅವರಿಗೆ ಮನಸಾರೆ ಹರಸುತ್ತಿದ್ದಾನೆ.
ಅವನು ಕೇಳುತ್ತಿರುವುದು ಕೇವಲ 10 ರೂ. ಮಾತ್ರ. ದೊಡ್ಡ ಮೊತ್ತದ ಹಣದ ಆಸೆ ಇಲ್ಲದೆ, ತನಗೆ ಸಿಕ್ಕ ಪುಟ್ಟ ಕಾಣಿಕೆಗೆ ಅವನು ನೀಡುವ ಗೌರವ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಈ ಮಗುವಿನ ಮುಖದಲ್ಲಿರುವ ಗಾಂಭೀರ್ಯ ಮತ್ತು ಭಕ್ತರ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುವ ರೀತಿ ನೋಡುಗರಿಗೆ “ದೈವತ್ವ” ಮಗುವಿನ ರೂಪದಲ್ಲಿ ಬಂದಿದೆಯೇನೋ ಎಂಬ ಭಾವ ಮೂಡಿಸುತ್ತಿದೆ. ಇಂದಿನ ವಾಣಿಜ್ಯೀಕರಣಗೊಂಡ ಜಗತ್ತಿನಲ್ಲಿ, ಈ ಮಗುವಿನ ಈ ಪುಟ್ಟ ಕಾಯಕ ಅತ್ಯಂತ ಶುದ್ಧವಾಗಿ ಕಾಣುತ್ತಿದೆ ಎಂದು ಸಾಮಾಜಿಕ ಬಳಕೆದಾರರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಮನೆಯ ಚಿನ್ನಾಭರಣಗಳನ್ನು ನೀಡಿ ಮೊಮೋಸ್ ತಿಂದ ಬಾಲಕ!
ವಿಡಿಯೋ ಇಲ್ಲಿದೆ ನೋಡಿ:
Young boy offering blessings for ₹10 at Shiva temple goes viral, winning hearts with sincerity and honesty.
He accepts donations of ₹10 from devotees and blesses them. pic.twitter.com/dmoRtpUAqx
— The Tatva (@thetatvaindia) February 4, 2026
ದೇವರಿಗಿಂತ ಭಕ್ತ ದೊಡ್ಡವನು, ಆ ಭಕ್ತನ ರೂಪ ಈ ಮಗು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಮಗುವಿನ ಹಾರೈಕೆಯಲ್ಲಿ ಯಾವುದೇ ಕಪಟವಿಲ್ಲ, ಹಾಗಾಗಿಯೇ ಇದು ನೇರವಾಗಿ ಮನಸ್ಸಿಗೆ ತಲುಪುತ್ತದೆ ಎಂದು ಹೇಳಿದ್ದಾರೆ. ಬದುಕಿನ ಜಂಜಾಟದಲ್ಲಿ ಸೋತು ದೇವಸ್ಥಾನಕ್ಕೆ ಬರುವ ಭಕ್ತರಿಗೆ, ಈ ಮಗುವಿನ ಒಂದು ಹಾರೈಕೆ ಹೊಸ ಭರವಸೆಯನ್ನು ನೀಡುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

