Breaking News

ಮೊದಲ ಬಾರಿಗೆ ತಾಯಿಯನ್ನು ವಿಮಾನದಲ್ಲಿ ಹಾರಾಡಿಸಿದ ಮನೀಶ್! ವಿಡಿಯೋ ವೈರಲ್

ಪ್ರತಿಯೊಬ್ಬ ಮಗನಿಗೂ ತನ್ನ ಪೋಷಕರ ಆಸೆಗಳನ್ನು ಈಡೇರಿಸುವ ಹಂಬಲವಿರುತ್ತದೆ. ಅಂತಹದ್ದೇ ಒಂದು ಸುಂದರ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ ಮನೀಶ್ ಎಂಬ ಯುವಕ ಹಂಚಿಕೊಂಡ ವಿಡಿಯೋ. ತಮ್ಮ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಮನೀಶ್, ಅವರ ಮುಖದಲ್ಲಿನ ಮುಗ್ಧ ಸಂತೋಷವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮನೀಶ್ ಅವರ ಇಡೀ ಕುಟುಂಬದಲ್ಲೇ ವಿಮಾನ ಪ್ರಯಾಣ ಮಾಡಿದ ಮೊದಲ ಮಹಿಳೆ ಇವರ ತಾಯಿಯಾಗಿದ್ದಾರೆ.

ವಿಮಾನ ಏರುವ ಮೊದಲಿನ ಬೆರಗು, ಆಕಾಶದಲ್ಲಿ ಹಾರುವಾಗ ಕಿಟಕಿಯ ಮೂಲಕ ಮೋಡಗಳನ್ನು ನೋಡಿ ಪಟ್ಟ ಆನಂದ ಎಲ್ಲವನ್ನೂ ಮನೀಶ್ ಅವರು ಪ್ರೀತಿಯಿಂದ ವಿಡಿಯೋ ಮಾಡಿದ್ದಾರೆ. ವಿಮಾನದಲ್ಲಿ ನೀಡಿದ ಆಹಾರವನ್ನು ಸವಿಯುವಾಗ ತಾಯಿ ತೋರುವ ನಾಚಿಕೆ ಮತ್ತು ನಗು ನೋಡುಗರ ಮನ ಗೆಲ್ಲುತ್ತಿದೆ. ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದೆ.

Advertisement

ಇದನ್ನೂ ಓದಿ: ಹೈವೇಯಲ್ಲಿ ಅಜ್ಜಿಯ ಅಬ್ಬರ: 120 ಸ್ಪೀಡ್‌ನಲ್ಲಿ ಕಾರು ನುಗ್ಗಿಸಿದ ‘ಡ್ಯಾಶಿಂಗ್ ದಾಡಿ’!

ಇಲ್ಲಿದೆ ನೋಡಿ ವಿಡಿಯೋ:

 

View this post on Instagram

 

A post shared by MK (@manishh_mk_)

ಈ ವಿಡಿಯೋ ನೋಡಿದ ಸಾವಿರಾರು ಜನರು ಮನೀಶ್ ಅವರನ್ನು ಕೊಂಡಾಡಿದ್ದಾರೆ. “ಪೋಷಕರ ಮುಖದಲ್ಲಿ ಇಂತಹ ನಗು ನೋಡುವುದೇ ಅಂತಿಮ ಯಶಸ್ಸು” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇದು ಕೇವಲ ಪ್ರವಾಸವಲ್ಲ, ತಾಯಿ-ಮಗನ ನಡುವಿನ ಅವಿನಾಭಾವ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು