ಏರ್‌ಪೋರ್ಟ್‌ನಲ್ಲಿ ಪುಂಡಾಟ: ಮಹಿಳಾ ಸಿಬ್ಬಂದಿ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟ ಅಸಾಮಿ; ವಿಡಿಯೋ ವೈರಲ್!

ಮುಂಬೈ: ವಿಮಾನ ನಿಲ್ದಾಣದಂತಹ ಅತ್ಯಂತ ಸುರಕ್ಷಿತ ಮತ್ತು ಕಟ್ಟುನಿಟ್ಟಿನ ನಿಯಮಗಳಿರುವ ಸ್ಥಳದಲ್ಲೇ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಮುಂಬೈ ಮೂಲದ್ದು ಎನ್ನಲಾದ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಾ ಅವರ ಮುಖಕ್ಕೇ ಸಿಗರೇಟ್ ಹೊಗೆಯನ್ನು ಊದಿರುವ ದೃಶ್ಯ ಸೆರೆಯಾಗಿದೆ.

ಉತ್ಕರ್ಷ್ ಗೌತಮ್ ಎಂದು ಗುರುತಿಸಲಾದ ಈ ಪ್ರಯಾಣಿಕ, ಸ್ಪೈಸ್‌ಜೆಟ್ (SpiceJet) ವಿಮಾನದ ಮೂಲಕ ಪ್ರಯಾಣಿಸಲು ಸಜ್ಜಾಗಿದ್ದನು. ವಿಮಾನ ನಿಲ್ದಾಣದ ರನ್ ವೇ (Tarmac) ಬಳಿ ಸಿಗರೇಟ್ ಸೇದುತ್ತಿದ್ದ ಈತನನ್ನು ಸಿಬ್ಬಂದಿ ಪ್ರಶ್ನಿಸಿದಾಗ, ಆತ ಅವರ ಮೇಲೆ ದರ್ಪ ತೋರಿದ್ದಾನೆ. ಮಹಿಳಾ ಸಿಬ್ಬಂದಿ ನಿಯಮಗಳ ಬಗ್ಗೆ ವಿವರಿಸುತ್ತಿದ್ದರೂ ಕೇಳದ ಈತ, ಕೌಂಟರ್‌ನ ಗಾಜಿನ ಸಂದುವಿನ ಮೂಲಕ ಅವರ ಮುಖಕ್ಕೆ ಹೊಗೆ ಬಿಟ್ಟಿದ್ದಾನೆ.

ವಿಡಿಯೋದಲ್ಲಿ ಈ ವ್ಯಕ್ತಿ ತನ್ನ ಸಂಬಳದ ಬಗ್ಗೆ ಮಾತನಾಡುತ್ತಾ ಸಿಬ್ಬಂದಿಯನ್ನು ಅವಮಾನಿಸಿದ್ದಾನೆ. “ನನ್ನ ಸಂಬಳ ಕೋಟಿಗಟ್ಟಲೆ ಇದೆ, ಅದನ್ನು ಗಟಾರಕ್ಕೆ ಹಾಕುತ್ತೇನೆ, ನಿಮ್ಮ ಮಿತಿಯಲ್ಲಿ ನೀವಿರಿ” ಎಂದು ಅಹಂಕಾರದ ಮಾತುಗಳನ್ನಾಡಿದ್ದಾನೆ. ಅಲ್ಲದೆ, ಸ್ಥಳದಲ್ಲಿದ್ದ ಸಿಬ್ಬಂದಿಯ ಮೇಲೆ ಹಣವನ್ನು ಎಸೆದು ದುರಹಂಕಾರ ಪ್ರದರ್ಶಿಸಿದ್ದಾನೆ.

ಇದನ್ನೂ ಓದಿ: ಚೀನಾ ಸಿಸಿಟಿವಿ ಕ್ಯಾಮೆರಾಗಳಿಗೆ ಭಾರತದಲ್ಲಿ ಸಂಕಷ್ಟ: ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಹೊಸ ಕಟ್ಟುನಿಟ್ಟಿನ ನಿಯಮ ಜಾರಿ!

ಈ ಅಶಿಸ್ತಿನ ವರ್ತನೆಯ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯು ಆತನನ್ನು ವಿಮಾನದಿಂದ ಕೆಳಗಿಳಿಸಿದೆ (Offloaded). ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ವಿಮಾನಯಾನ ಸಂಸ್ಥೆಯು ಈತನನ್ನು ‘Unruly Passenger’ ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು