ಬೆಂಗಳೂರು: ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ. ಈ ಸಮಯದಲ್ಲಿ ದೇಹವನ್ನು ತಂಪಾಗಿರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ವೀಳ್ಯದೆಲೆ (Betel Leaf) ಮತ್ತು ಗುಲ್ಕನ್ (Gulkand) ಶರಬತ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಕೇವಲ ಬಾಯಾರಿಕೆ ತಣಿಸುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಹತ್ತಾರು ಪ್ರಯೋಜನಗಳನ್ನು ನೀಡುತ್ತದೆ.
ತಯಾರಿಸಲು ಬೇಕಾಗುವ ಪದಾರ್ಥಗಳು:

ತಾಜಾ ವೀಳ್ಯದೆಲೆಗಳು (೪-೫)
ಗುಲ್ಕನ್ (೨ ಚಮಚ)

ಏಲಕ್ಕಿ ಪುಡಿ (ಸ್ವಲ್ಪ)
ಸಕ್ಕರೆ ಅಥವಾ ಜೇನುತುಪ್ಪ (ರುಚಿಗೆ ತಕ್ಕಷ್ಟು)

ತಣ್ಣನೆಯ ಹಾಲು ಅಥವಾ ನೀರು
ಐಸ್ ಕ್ಯೂಬ್ಸ್
ತಯಾರಿಸುವ ವಿಧಾನ:
೧. ಮೊದಲು ವೀಳ್ಯದೆಲೆಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ.
೨. ಮಿಕ್ಸಿ ಜಾರ್‌ಗೆ ಕತ್ತರಿಸಿದ ಎಲೆಗಳು, ಗುಲ್ಕನ್, ಏಲಕ್ಕಿ ಪುಡಿ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
೩. ಈ ಮಿಶ್ರಣಕ್ಕೆ ತಣ್ಣನೆಯ ಹಾಲು ಅಥವಾ ನೀರನ್ನು ಸೇರಿಸಿ ಮತ್ತೆ ಒಂದು ಬಾರಿ ಮಿಕ್ಸಿ ಮಾಡಿ.
೪. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ.
೫. ಗಾಜಿನ ಲೋಟಕ್ಕೆ ಐಸ್ ಕ್ಯೂಬ್ಸ್ ಹಾಕಿ, ಸಿದ್ಧಪಡಿಸಿದ ಶರಬತ್ ಸೋಸಿಕೊಂಡು ಸವಿಯಿರಿ.
ಇದನ್ನೂ ಓದಿ: ಮಧುಮೇಹ: ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವಿರಿ, ಎಚ್ಚರ..
ಪ್ರಯೋಜನಗಳು:
ಇದು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುತ್ತದೆ.
ವೀಳ್ಯದೆಲೆ ಮತ್ತು ಗುಲ್ಕನ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಕಾರಿ.
ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

