ಅದಾನಿ ವಿರುದ್ಧ SEC ಪ್ರಕರಣ: ಅಮೆರಿಕಾ ನ್ಯಾಯಾಲಯ ವಿಚಾರಣೆಗೆ ಹಸಿರು ನಿಶಾನೆ – 

ನ್ಯೂಯಾರ್ಕ್, : ಭಾರತೀಯ ಉದ್ಯಮಿ ಗೌತಮ್ ಅದಾನಿ ವಿರುದ್ಧ ಯು . ಎಸ್ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ದಾಖಲಿಸಿರುವ ವಂಚನೆ ಪ್ರಕರಣವನ್ನು ರದ್ದುಗೊಳಿಸುವ ಮನವಿಗೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಲಯವು ವಿಚಾರಣೆಗೆ ಅನುಮತಿ ನೀಡಿದೆ.

ಅಡಾನಿ ಪರ ವಕೀಲರು ನ್ಯಾಯಾಲಯದಲ್ಲಿ ಮಂಡಿಸಿದ ವಾದದಲ್ಲಿ, ಈ ಪ್ರಕರಣಕ್ಕೆ ಅಮೆರಿಕದ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ, ಆರೋಪಿತ ಲಂಚ ಪ್ರಕರಣಕ್ಕೆ ದೃಢವಾದ ಸಾಕ್ಷ್ಯಗಳಿಲ್ಲದೆ, ಹೂಡಿಕೆದಾರರಿಗೆ ಯಾವುದೇ ನಷ್ಟವಾಗಿಲ್ಲ ಎಂದು ವಾದಿಸಿದ್ದಾರೆ.

ಇದನ್ನೂ ಓದಿ ಇರಾನ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರದಿಂದ ತುರ್ತು ಅಲರ್ಟ್: “ಮುಂದಿನ 48 ಗಂಟೆ ಇದ್ದಲ್ಲಿಯೇ ಇರಿ!”

ಇದಲ್ಲದೆ, ಸೌರ ವಿದ್ಯುತ್ ಒಪ್ಪಂದಗಳಿಗೆ ಸಂಬಂಧಿಸಿದ ಲಂಚದ ಆರೋಪಗಳು ಆಧಾರರಹಿತವಾಗಿದ್ದು, ಬಾಂಡ್‌ ಬಿಡುಗಡೆ ಪ್ರಕ್ರಿಯೆಯಲ್ಲಿ ಅದಾನಿ ಅವರ ನೇರ ಭಾಗವಹಿಸುವಿಕೆ ಇಲ್ಲ ಎಂದು ವಕೀಲರು ತಿಳಿಸಿದ್ದಾರೆ.

SEC ಆರೋಪದ ಪ್ರಕಾರ, ಅದಾನಿ ಗುಂಪು ಭಾರತದಲ್ಲಿ ಸೌರ ವಿದ್ಯುತ್ ಯೋಜನೆಗಳಿಗೆ ಒಪ್ಪಂದಗಳನ್ನು ಪಡೆಯಲು ಲಂಚ ನೀಡಲು ಯತ್ನಿಸಿದ್ದು, ಈ ಮಾಹಿತಿಯನ್ನು ಹೂಡಿಕೆದಾರರಿಂದ ಮರೆಯಲಾಗಿದೆ ಎಂದು ಹೇಳಲಾಗಿದೆ.

ಆದರೆ, ಅದಾನಿ ಗ್ರೂಪ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ, ಯಾವುದೇ ತಪ್ಪು ನಡೆಯಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯವು ಈ ಮನವಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದುವರಿಸಲು ಅನುಮತಿ ನೀಡಿದ್ದು, ಮುಂದಿನ ಹಂತದಲ್ಲಿ ಪ್ರಕರಣ ಮುಂದುವರಿಯಬೇಕೇ ಅಥವಾ ರದ್ದುಗೊಳ್ಳಬೇಕೇ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಿದೆ.

ಅದಾನಿ ಪ್ರಕರಣ ಅಮೆರಿಕದ ನ್ಯಾಯಾಲಯದಲ್ಲಿ ಪ್ರಮುಖ ತಿರುವು ಪಡೆದಿದ್ದು, ಮುಂದಿನ ವಿಚಾರಣೆ ಈ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.

ವಿದೇಶದ ಇನ್ನಷ್ಟು ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ